
ಚಾಮರಾಜನಗರ: ಭಾರಿ ಮಳೆಗೆ (Karnataka Rain) ನದಿ, ಹಳ್ಳ-ಕೊಳ್ಳಗಳು ಉಕ್ಕಿ ಹರಿಯುತ್ತಿವೆ. ಚಾಮರಾಜನಗರ ಜಿಲ್ಲೆಯ ಕೊಳ್ಳೇಗಾಲ ತಾಲೂಕಿನ ಭರಚುಕ್ಕಿ ಜಲಪಾತ (Bharachukki Falls) ಭೋರ್ಗರೆಯುತ್ತಿದ್ದು, ಮುನ್ನೆಚ್ಚರಿಕೆ ಕ್ರಮವಾಗಿ ಪ್ರವಾಸಿಗರಿಗೆ ನಿರ್ಬಂಧ ವಿಧಿಸಲಾಗಿದೆ. ಕಬಿನಿ ಹಾಗೂ ಕೆಆರ್‌ಎಸ್ ಜಲಾಶಯದಿಂದ ಅಪಾರ ಪ್ರಮಾಣದಲ್ಲಿ ನೀರು ಬಿಡುಗಡೆ ಮಾಡಲಾಗುತ್ತಿದೆ. ಹೀಗಾಗಿ ಭರಚುಕ್ಕಿ ಜಲಪಾತ ಭೋರ್ಗರೆಯುತ್ತಿದೆ.
ಯುವಕರ ಗುಂಪೊಂದು ನಿರ್ಬಂಧ ಇದ್ದರೂ ಪೊಲೀಸರ ಕಣ್ಣು ತಪ್ಪಿಸಿ ಜಲಪಾತ ತುದಿಗೆ ಹೋಗಿದೆ. ತುದಿಯಲ್ಲಿ ನಿಂತು ಫೋಟೊ, ಸೆಲ್ಫಿ ತೆಗೆದುಕೊಳ್ಳುವ ದುಸ್ಸಾಹಸದಲ್ಲಿ ಈ ಗುಂಪು ತೊಡಗಿತ್ತು. ಇವರ ಹುಚ್ಚಾಟ ಮಿತಿ ಮೀರಿದಾಗ ಅದು ಪೊಲೀಸರ ಗಮನಕ್ಕೆ ಬಂತು.
ಅದು ಕಳ್ಳ ಮಾರ್ಗದ ಮೂಲಕ ಜಲಪಾತದ ಮೇಲೆ ತೆರಳಿ ಹುಚ್ಚಾಟ ಮೆರೆಯುತ್ತಿದ್ದ ಯುವಕರು ಪೊಲೀಸರ ಕೈಗೆ ಲಾಕ್ ಆಗಿದ್ದಾರೆ. ಹೀಗೆ ಸಿಕ್ಕಿ ಬಿದ್ದ ಯುವಕರಿಗೆ ಪೊಲೀಸರು ಬಸ್ಕಿ ಹೊಡೆಸಿ ಶಿಕ್ಷೆ ಕೊಟ್ಟಿದ್ದಾರೆ. ಬಸ್ಕಿ ಹೊಡಿಸಿ ಎಚ್ಚರಿಕೆ ನೀಡಿ ಕಳಿಸಿದ್ದಾರೆ. ಮತ್ತೊಮ್ಮೆ ಕದ್ದು ಮುಚ್ಚಿ ಇಲ್ಲಿಗೆ ಬರದಂತೆ ಬುದ್ಧಿವಾದ ಹೇಳಿ ಕಳಿಸಿದರು. ಯುವಕರು ಬಸ್ಕಿ ಹೊಡೆಯುವ ವಿಡಿಯೊ ವೈರಲ್ ಆಗಿದೆ.
Poll (Public Option)

Post a comment
Log in to write reviews