
ಬ್ರೆಜಿಲ್: ಪ್ರಯಾಣಿಕ ಹೊತ್ತುಯುತ್ತಿದ್ದ ವಿಮಾನವೊಂದು ಪತನಗೊಂಡು ವಿಮಾನದಲ್ಲಿ ಪ್ರಯಾಣಿಸುತ್ತಿದ್ದ 62 ಜನ ಸಾವಿಗೀಡಾಗಿರುವ ಘಟನೆ ಬ್ರೆಜಿಲ್‌ನಲ್ಲಿ ನಡೆದಿದೆ.
ಬ್ರೆಜಿಲ್‌ನ ಪ್ರಾದೇಶಿಕ ವಿಮಾನಯಾನ ಸಂಸ್ಥೆ ವೊಯಿಪಾಸ್‌ಗೆ ಸೇರಿದ ವಿಮಾನ ಇದಾಗಿದ್ದು 58 ಪ್ರಯಾಣಿಕರು ಮತ್ತು ನಾಲ್ವರು ಸಿಬ್ಬಂದಿ ಈ ವಿಮಾನದಲ್ಲಿ ಪ್ರಾಯಾನಿಸುತ್ತಿದ್ದರು ಎಂದು ತಿಳಿದು ಬಂದಿದೆ.
ವಿಮಾನ ಪತನಗೊಳ್ಳುತ್ತಿರುವ ದೃಶ್ಯ ಕ್ಯಾಮರಾದಲ್ಲಿ ಸೆರೆ ಆಗಿದ್ದು, ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗುತ್ತಿದೆ.
ಸಾವೋ ಪಾಲೋದ ವಿನ್ಹೆದೊ ಎಂಬಲ್ಲಿ ಪತನಗೊಂಡ ವಿಮಾನ ಬಳಿಕ ಜನವಸತಿ ಪ್ರದೇಶದಲ್ಲಿ ಕೆಳಗೆ ಬಿದ್ದಿದೆ. ವಿಮಾನ ಪತನಗೊಂಡು ರಭಸಕ್ಕೆ ಸ್ಥಳೀಯ ಕಂಡೋಮಿನಿಯಂ ಸಂಕೀರ್ಣದ ಮೇಲೆ ಬಿದ್ದಿದ್ದು, ಇದರಿಂದ ಕಟ್ಟಡಕ್ಕೆ ಸಂಪೂರ್ಣ ಹಾನಿಯಾಗಿದೆ. ಆದರೆ ಈ ಘಟನೆಯಲ್ಲಿ ಕಟ್ಟಡದಲ್ಲಿದ್ದ ಯರಿಗೂ ಹಾನಿಯಾಗಿಲ್ಲ. ಎರಡು ಇಂಜಿನ್‌ಗಳನ್ನು ಹೊಂದಿದ್ದ ಈ ವಿಮಾನ ದಕ್ಷಿಣ ಬ್ರೆಜಿಲ್‌ನ ರಾಜ್ಯವಾದ ಪರನಾದ ಕಸ್ಕವೆಲ್ ನಗರದಿಂದ ಟೇಕಾಫ್ ಆಗಿತ್ತು. ಕಸ್ಕವೆಲ್‌ನಿಂದ ಇದು ಬ್ರೆಜಿಲ್‌ನ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣ ಸಾವೋ ಪಾಲೋದತ್ತ ಆಗಮಿಸುತ್ತಿದ್ದ ವೇಳೆ ಈ ದುರಂತ ಸಂಭವಿಸಿದೆ ಎಂದು ಬಿಬಿಸಿ ವರದಿ ಮಾಡಿದೆ.
Poll (Public Option)

Post a comment
Log in to write reviews