
ಇತ್ತೀಚೆಗೆ ನಿರಂತರವಾಗಿ ಹೆಣ್ಣಿನ ಮೇಲೆ ಅತ್ಯಾಚಾರಗಳು ನಡೆಯುತ್ತಿವೆ. ಆದರೆ ಅತ್ಯಾಚಾರ ಮಾಡುವ ಕ್ರಿಮಿಗಳು ತಾವು ಕೂಡ ಒಂದು ಹೆಣ್ಣಿನ ಹೊಟ್ಟೆಯಿಂದ ಜನಿಸಿದ್ದಾರೆ ಎಂಬುದನ್ನು ಮರೆತು ನೀಚ ಕೃತ್ಯವೆಸಗುತ್ತಿದ್ದಾರೆ. ಅಂತಹ ಪಾಪಿಗಳನ್ನು, ದೇವಿಯು ಮಹಿಷಾಸುರನನ್ನು ಸಂಹಾರ ಮಾಡಿದಂತೆ ಸಮಾಜ ಜನರು ಅತ್ಯಾಚಾರಿಗಳನ್ನು ಸಂಹಾರ ಮಾಡಬೇಕು ಎಂಬುದನ್ನು ಕನ್ನಡದ ಖ್ಯಾತ ರ್ಯಾಪರ್ ಆದಂತಹ ಆಲ್.ಓಕೆ ಅವರು ಅದ್ಭುತ ಹಾಡೊಂದನ್ನು ಬರೆದು ತಾವೇ ಧ್ವನಿಗೂಡಿಸಿ ಆ ಹಾಡನ್ನು ಬಿಡುಗಡೆ ಮಾಡಿದ್ದಾರೆ.
ಆಲ್ ಓಕೆ ನಿರ್ಮಿಸಿ ಯುಟ್ಯೂಬ್‌ನಲ್ಲಿ ʻಐ’ ಹೆಸರಿನಲ್ಲಿ ವಿಡಿಯೋ ಹಾಡನ್ನು ರಿಲೀಸ್ ಮಾಡಿದ್ದಾರೆ. ಅತ್ಯಾಚಾರಕ್ಕೆ ಒಳಗಾದ ಹೆಣ್ಣು ಮಗಳಂತೆ ನಟಿ ಅಮೃತಾ ಅಯ್ಯಂಗಾರ್ ನಟಿಸಿದ್ದು. ಪೊಲೀಸ್ ಪಾತ್ರದಲ್ಲಿ ನಟಿ ಮಾಲಾಶ್ರೀಯವರು ಗುರುತಿಸಿಕೊಂಡಿದ್ದಾರೆ.
ʻShe Will Rise’ ಎಂಬುದು ಕೇವಲ ಒಂದು ಜಾಹೀರಾತು ಮಾತ್ರವಲ್ಲ, ಅದು ಒಂದು ಪ್ರತಿಜ್ಞೆ. ಧೈರ್ಯದ ಹೆಣ್ಣುಮಕ್ಕಳಿಗೆ ಈ ಹಾಡು ಸಮರ್ಪಿತವಾಗಿದೆ. ನ್ಯಾಯ ಮತ್ತು ಬದಲಾವಣೆಗೆ ಕಿರುಚುವ ಸ್ವರವಾಗಿದೆ. ಬನ್ನಿ, ಒಟ್ಟಾಗಿ ನಿಲ್ಲೋಣ, ಯಾವುದೇ ಸ್ವರ ಮೌನವಾಗದಂತೆ ನೋಡಿಕೊಳ್ಳೋಣ ಎಂದು ಸಾಮಾಜಿಕ ಜಾಲತಾಣದಲ್ಲೂ ವಿಡಿಯೋ ಹಂಚಿಕೊಂಡಿದ್ದಾರೆ. ಈ ಹಾಡು ಕೇಳಿ ಸಮಾಜಕ್ಕೆ ಉತ್ತಮ ಸಂದೇಶ ಸಾರಿದ್ದೀರಿ ಎಂದು ಅನೇಕರು ಹೊಗಳುತ್ತಿದ್ದಾರೆ. ಹಾಡು ಬಿಡುಗಡೆಗೊಂಡ 2 ಗಂಟೆಯಲ್ಲೇ ಸಾಕಷ್ಟು ವೀಕ್ಷಣೆಯನ್ನು ಪಡೆದಿದೆ.
Poll (Public Option)

Post a comment
Log in to write reviews