
ಲೈಂಗಿಕ ದೌರ್ಜನ್ಯ ಆರೋಪ ಎದುರಿಸುತ್ತಿರುವ ಹಾಸನ ಸಂಸದ ಪ್ರಜ್ವಲ್ ನನ್ನು ಸ್ಥಳ ಮಹಜರು ನಡೆಸಲು ಕರೆದೊಯ್ಯಲು ಎಸ್‌ಐಟಿ ಸಿದ್ಧತೆ ನಡೆಸಿದೆ.
ಕಳೆದ ಮೂರು ದಿನಗಳಿಂದ ಎಸ್‌ಐಟಿ ವಶದಲ್ಲಿರುವ ಪ್ರಜ್ವಲ್ ಪ್ರಜ್ವಲ್ ನನ್ನು ತನಿಖಾಧಿಕಾರಿಗಳು ಸ್ಥಳ ಮಹಜರು ನಡೆಸಲು ನಿರ್ಧರಿಸಿದ್ದು ಬಹುತೇಕ ಸೋಮವಾರವೇ ಈ ಪ್ರಕ್ರಿಯೆ ನಡೆಸಲಿದ್ದಾರೆ. ಮಂಗಳವಾರ ಲೋಕಸಭಾ ಚುನಾವಣೆಯ ಫಲಿತಾಂಶ ಹೊರಬೀಳುವುದರಿಂದ ಫಲಿತಾಂಶದಲ್ಲಿ ಹಾಗೊಂದು ವೇಳೆ ಪ್ರಜ್ವಲ್ ಗೆದ್ದರೆ ಆನಂತರ ಹಾಸನ, ಹೊಳೆನರಸೀಪುರಕ್ಕೆ ಕರೆದೊಯ್ದು ಸ್ಥಳ ಮಹಜರು ನಡೆಸುವುದು ಭದ್ರತಾ ದೃಷ್ಟಿಯಿಂದ ಕಷ್ಟವಾಗಬಹುದೆಂದು ಅಂದಾಜು ಹಾಕಿರುವ ಎಸ್‌ಐಟಿ ಪೊಲೀಸರು ಫಲಿತಾಂಶಕ್ಕೂ ಮುನ್ನವೇ ಸ್ಥಳ ಮಹಜರು ನಡೆಸಲು ಮುಂದಾಗಿದ್ದಾರೆಂದು ಬಲ್ಲ ಮೂಲಗಳು ತಿಳಿಸಿವೆ.
ಪ್ರಜ್ವಲ್ ರೇವಣ್ಣ ನನ್ನು ಹೊಳೆನರಸೀಪುರದ 'ಚೆನ್ನಾಂಬಿಕಾ ನಿವಾಸ', ತೋಟದ ಮನೆ, ಚನ್ನರಾಯಪಟ್ಟಣ ತಾಲ್ಲೂಕಿನ ಗನಿಗಡದಲ್ಲಿರುವ ತೋಟದ ಮನೆ, ಹಾಸನದಲ್ಲಿರುವ ಸಂಸದರ ಕ್ವಾಟರ್ಸ್ಗೆ ಕರೆದೊಯ್ದು ಸ್ಥಳ ಮಹಜರು ನಡೆಸಲು ತನಿಖಾಧಿಕಾರಿಗಳು ನಿರ್ಧರಿಸಿದ್ದಾರೆ.
Poll (Public Option)

Post a comment
Log in to write reviews