
ಬಿಗ್ಬಾಸ್ ಮನೆಯಲ್ಲೀಗ ರಾಜಕೀಯ ಬಿರುಗಾಳಿ ಎದ್ದಿದೆ. ಇದೀಗ ಸುದ್ದಿ ನಿರೂಪಕಿ ರಾಧಾ ಹಿರೇಗೌಡರ್ ಅವರು ಬಿಗ್ಬಾಸ್ ಮನೆಗೆ ಎಂಟ್ರಿ ನೀಡಿದ್ದಾರೆ. ಮನೆಯಲ್ಲಿ ಬಿಸಿ ಬಿಸಿ ರಾಜಕೀಯದ ಟಾಸ್ಕ್ ನಡೆಯುತ್ತಿದ್ದು, ಮನೆಯ ರಾಜಕೀಯ ಪಕ್ಷಗಳನ್ನು, ರಾಜಕಾರಣಿಗಳನ್ನು ವಿಮರ್ಶೆಗೆ ಒಳಪಡಿಸಿದ್ದಾರೆ.
ಇನ್ನೂ ಮನೆಯ ಸದಸ್ಯರನ್ನು ಎರಡು ರಾಜಕೀಯ ಪಕ್ಷಗಳನ್ನಾಗಿ ವಿಂಗಡಿಸಿ ರಾಜಕೀಯದ ಟಾಸ್ಕ್ ನೀಡಿದ್ದಾರೆ ಬಿಗ್ಬಾಸ್. ಮನೆಯಲ್ಲಿ ಪಕ್ಷ ರಾಜಕೀಯದ ಹವಾ ಜೋರಾಗಿರುವ ಸಂದರ್ಭದಲ್ಲಿಯೇ ಮನೆಗೆ ಸುದ್ದಿ ನಿರೂಪಕಿಯೊಬ್ಬರ ಎಂಟ್ರಿ ಆಗಿದೆ. ಕನ್ನಡದ ಬೇರೆ ಬೇರೆ ವಾಹಿನಿಗಳಲ್ಲಿ ಜನಪ್ರಿಯತೆ ಗಳಿಸಿರುವ ರಾಧಾ ಹಿರೇಗೌಡರ್ ಅವರು ಬಿಗ್ಬಾಸ್ ಮನೆಗೆ ಎಂಟ್ರಿ ಕೊಟ್ಟಿದ್ದು, ಮನೆಯಲ್ಲಿರುವ ಎರಡು ರಾಜಕೀಯ ಪಕ್ಷಗಳ ಹಾಗೂ ರಾಜಕಾರಣಿಗಳ ನೇರಾ-ನೇರ ವಿಶ್ಲೇಷಣೆ ಮಾಡಿದ್ದಾರೆ.
Poll (Public Option)

Post a comment
Log in to write reviews