
ಶಿವಮೊಗ್ಗ, ಆ.09: ಸಾಕು ಬೆಕ್ಕು ಕಚ್ಚಿ ಮಹಿಳೆ ಸಾವನ್ನಪ್ಪಿದ ದಾರುಣ ಘಟನೆಯು ಶಿವಮೊಗ್ಗ ಜಿಲ್ಲೆಯ ಶಿಕಾರಿಪುರ ತಾಲೂಕಿನ ತರಲಘಟ್ಟದಲ್ಲಿ ನಡೆದಿದೆ.
ಗಂಗೀಬಾಯಿ(50) ಮೃತ ಮಹಿಳೆ ಎಂದು ತಿಳಿದು ಬಂದಿದೆ. ಇನ್ನು ಈ ಕುರಿತು ಮಾತನಾಡಿದ ಮೃತರ ಮಗ ಕಿರಣ್, ಮನೆಯಲ್ಲಿ ಬೆಕ್ಕು ಸಾಕಿದ್ದೇವು. ಅದು ಎರಡು ತಿಂಗಳ ಹಿಂದೆ ನಮ್ಮ ಅಮ್ಮನಿಗೆ ಕಚ್ಚಿತ್ತು. ಇದಾದ ಬಳಿಕ ಮೂರ್ನಾಲ್ಕು ದಿವಸ ಕೆಲಸಕ್ಕೆ ಹೋಗಿದ್ದರು. ಈ ವೇಳೆ ಮಳೆಯಲ್ಲಿ ಒದ್ದೆಯಾಗಿದ್ದಕ್ಕೆ , ಬೆಕ್ಕು ಕಚ್ಚಿದ ಜಾಗ ಸೆಪ್ಟಿಕ್ ಆಗಿತ್ತು. ಇದಾದ ನಂತರ ನಮ್ಮ ಅಮ್ಮ ಕಾಲು ಸೆಳೆಯುತ್ತದೆ ಎಂದು ಹೇಳಿದ್ದರು. ಹೀಗಾಗಿ ಹತ್ತಿರದ ಆಸ್ಪತ್ರೆಗೆ ಕರೆದುಕೊಂಡು ಹೋಗಿ ತೋರಿಸಿದ್ದೇವು. ಅವರು ಐದು ಇಂಜೆಕ್ಷನ್ ಹಾಕಲು ಹೇಳಿದ್ದರು. ಅದರಂತೆ ಒಂದು ಇಂಜೆಕ್ಷನ್ ಹಾಕಲಾಗಿತ್ತು. ಇದಾದ ಬಳಿಕ ಆರೋಗ್ಯದಲ್ಲಿ ಚೇತರಿಕೆ ಆದ ಹಿನ್ನಲೆ ಉಳಿದ ನಾಲ್ಕು ಇಂಜೆಕ್ಷನ್ ಹಾಕಿಸಲಿಲ್ಲ. ನಿನ್ನೆ(ಆ.08) ಸ್ವಲ್ಪ ಆರೋಗ್ಯದಲ್ಲಿ ಏರುಪೇರಾಗಿದ್ದಕ್ಕೆ ಮತ್ತೆ ಆಸ್ಪತ್ರೆಗೆ ಕರೆದುಕೊಂಡು ಬಂದಿದ್ದೇವೂ. ಆದರೆ ಚಿಕಿತ್ಸೆ ಫಲಿಸಿದೇ ಕೊನೆಯುಸಿರೆಳೆದಿದ್ದಾರೆ ಎಂದು ಮಗ ಅಳಲು ತೋಡಿಕೊಂಡರು.
Poll (Public Option)

Post a comment
Log in to write reviews