2024-09-19 09:17:18

News broadcasting is the medium of broadcasting various news events and other information via television, radio, or the internet in the field of broadcast journalism.

Get In Touch

  • info@samayanews.tv
  • 8050000444
  • Samaya News, 48, 2nd Floor, 2nd Main, 2nd Cross, Ganganagar, Muthappa Block, RT Nagar, Bengaluru, Karnataka 560032

ಬಿಡುಗಡೆಗೆ ಸಿದ್ಧವಿರುವ ಬಹು ನಿರೀಕ್ಷಿತ  ಪ್ಯಾನ್‌ ಇಂಡಿಯಾ ಸಿನಿಮಾಗಳು.

2024 ಅರ್ಧ ವರ್ಷ ಕಳೆದರೂ ಈ ಬಾರಿ ಅಷ್ಟೇನು ದೊಡ್ಡ ನಟರ ದೊಡ್ಡ ಮಟ್ಟದ ಚಿತ್ರಗಳು ಚಿತ್ರ ಮಂದಿರದಲ್ಲಿ ಬಿಡುಗಡೆಯಾಗಲಿಲ್ಲ. ಏಷ್ಟೋ ದೊಡ್ಡ ನಟರ ಪ್ಯಾನ್ ಇಂಡಿಯಾ ಚಿತ್ರಗಳು ರೀಲೀಸ್ ಗೆ ರೆಡಿ ಇದ್ದರೂ ಇನ್ನೂ ರಿಲೀಸ್ ಆಗಿಲ್ಲ. ಈ ಹಿನ್ನೆಲೆ ಇನ್ನೂ ಮುಂದೆ ಬಿಡುಗಡೆಯಾಗಲು ಸಿದ್ಧವಿರುವ  ಬಹುನಿರೀಕ್ಷಿತ ಚಿತ್ರಗಳು ಯಾವುವು. ಅವುಗಳ ಬಿಡುಗಡೆ ದಿನಾಂಕದ  ಬಗ್ಗೆ ತಿಳಿದುಕೊಳ್ಳೋಣ ಬನ್ನಿ.

1) ಕಲ್ಕಿ 2098
ಪ್ರಭಾಸ್ ನಟನೆಯ ಕಲ್ಕಿ 2898 ad ಬಹು ನಿರೀಕ್ಷಿತ ಚಿತ್ರಗಳಲ್ಲಿ ಒಂದಾಗಿದೆ. ನಾಗ್ ಅಶ್ವಿನ್ ನಿರ್ದೇಶನದ ಈ ಸಿನಿಮಾ 27 ಜೂನ್ 2024 ರಂದು ಬಿಡುಗಡೆಯಾಗಲಿದೆ ಎಂದು ಚಿತ್ರ ತಂಡ ತಿಳಿಸಿದೆ. ಈ ಚಿತ್ರದಲ್ಲಿ  ದೀಪಿಕಾ ಪಡುಕೋಣೆ ಪ್ರಭಾಸ್ ಗೆ ನಾಯಕಿಯಾಗಿದ್ದಾರೆ.

2) ಪುಷ್ಪ 2 ದ ರೂಲ್
ಅಲ್ಲೂ ಅರ್ಜುನ್ ನಟನೆಯ ಪುಷ್ಪ 2 ದ ರೂಲ್ ಸಿನಿಮಾ ಕೂಡ ಬಹು ನಿರೀಕ್ಷಿತ ಪ್ಯಾನ್ ಇಂಡಿಯಾ ಸಿನಿಮಾದಲ್ಲಿ ಒಂದಾಗಿದೆ. ಈ ಸಿನಿಮಾ ಈಗ ಟೀಸರ್ ಹಾಗೂ ಸಾಂಗ್ ನಿಂದಾಗಿಯೇ ಎಲ್ಲೆಡೆ ಸಖತ್ ಹವಾ ಕ್ರಿಯೇಟ್ ಮಾಡುತ್ತಿದೆ. ಆಗಸ್ಟ್ 15 ರಂದು ಈ ಚಿತ್ರ ವಿಶ್ವದಾದ್ಯಂತ ಬಿಡುಗಡೆಯಾಗಲಿದ್ದು, ಈ ಚಿತ್ರಕ್ಕೆ ಎಸ್ ಸುಕುಮಾರ್ ರವರ ನಿರ್ದೇಶನವಿದೆ. ಈ ಚಿತ್ರದಲ್ಲಿ ಅಲ್ಲೂ ಅರ್ಜುನ್ ಗೆ ನಾಯಕಿಯಾಗಿ ರಶ್ಮಿಕ ಮಂದಣ್ಣ ನಟಿಸುತ್ತಿದ್ದಾರೆ.

3) ಕಾಂತಾರ ಚಾಪ್ಟರ್ 1
ರಿಷಬ್ ಶೆಟ್ಟಿ ನಟನೆಯ ಕಾಂತಾರ ಬಿಡುಗಡೆಯಾಗಿ ಎಲ್ಲೆಡೆ ಸಖತ್ ಸದ್ದು ಮಾಡಿತ್ತು, ಇದೀಗ ರಿಷಬ್ ಶೆಟ್ಟಿ ಕಾಂತಾರ ಚಾಪ್ಟರ್ 1 ಸಿನಿಮಾವನ್ನು ನಿರ್ದೇಶನ ಮಾಡುತ್ತಿದ್ದಾರೆ. ಈ ಸಿನಿಮಾ ಕೂಡ ಬಹು ನಿರೀಕ್ಷಿತ   ಪ್ಯಾನ್ ಇಂಡಿಯಾ ಚಿತ್ರಗಳಲ್ಲಿ ಒಂದಾಗಿದೆ. ಈ ಚಿತ್ರದ ಶೂಟಿಂಗ್ ನಡೆಯುತ್ತಿದ್ದು, ಈ ವರ್ಷ ಡಿಸೆಂಬರ್ ನಲ್ಲಿ ಈ ಚಿತ್ರ ರಿಲೀಸ್ ಆಗಲಿದೆ ಎಂದು ಮಾಹಿತಿಗಳು ಬಲ್ಲ ಮೂಲಗಳಿಂದ ತಿಳಿದುಬಂದಿದೆ. 

4) ತಂಗಲಾನ್ 
ವಿಕ್ರಂ ನಟನೆಯ ತಂಗಲಾನ್ ಸಿನಿಮಾ ಕೂಡ  ಬಹು  ನಿರೀಕ್ಷಿತ ಪ್ಯಾನ್ ಇಂಡಿಯಾ ಸಿನಿಮಾಗಳಲ್ಲಿ ಒಂದಾಗಿದೆ. ಈ ಸಿನಿಮಾ 12 ಏಪ್ರಿಲ್ 2024 ವಿಶ್ವದಾದ್ಯಂತ ಬಿಡುಗಡೆಗೆ ಸಿದ್ಧವಾಗಿದೆ. ಪಾ ರಂಜಿತ್ ಈ ಸಿನಿಮಾವನ್ನು ನಿರ್ದೇಶನ ಮಾಡುತ್ತಿದ್ದು, ವಿಕ್ರಂ ಗೆ ನಾಯಕಿಯಾಗಿ ಈ ಸಿನಿಮಾದಲ್ಲಿ ಮಾಳವಿಕ ಮೋಹನ್ ನಟಿಸಿದ್ದಾರೆ. 

5) ಕಂಗೂವ 
ಸೂರ್ಯ ನಟನೆಯ ಕಂಗೂವ ಚಿತ್ರ ಕೂಡ ಈ ಬಾರಿಯ ಬನಿರೀಕ್ಷಿತ ಚಿತ್ರಗಳಲ್ಲಿ ಒಂದಾಗಿದೆ. ಈ ಸಿನಿಮಾ 2024 ರ ಕೊನೆಯಲ್ಲಿ ರಿಲೀಸ್ ಆಗಲು ರೆಡಿಯಿದ್ದು, ಚಿತ್ರತಂಡ  ಇನ್ನೂ ನಿಖರವಾದ ರಿಲೀಸ್ ಡೀಟ್ ಬಗ್ಗೆ ಮಾಹಿತಿ ನೀಡಿಲ್ಲ. ಈ ಸಿನಿಮಾವನ್ನು ಶಿವ ನಿರ್ದೇಶನ ಮಾಡುತ್ತಿದ್ದು ಸೂರ್ಯಗೆ ನಾಯಕಿಯಾಗಿ ದಿಶಾ ಪಟಾನಿ ನಡೆಸುತ್ತಿದ್ದಾರೆ ಎನ್ನಲಾಗಿದೆ.

ಈ ಎಲ್ಲಾ ಸಿನಿಮಾಗಳು  ರಿಲೀಸ್ ಗೆ ರೆಡಿ ಇರುವ ಪ್ಯಾನ್ ಇಂಡಿಯಾ ಸಿನಿಮಾಗಳಾಗಿವೆ. ಇತ್ತೀಚಿನ ದಿನಗಳಲ್ಲಿ ದೊಡ್ಡ ದೊಡ್ಡ ಸಿನಿಮಾ ಗಳು 
ಅತಿ ಹೆಚ್ಚಾಗಿ ರೀಲೀಸ್ ಆಗುತ್ತಿಲ್ಲ ಆದ್ದರಿಂದ ಥಿಯೇಟರ್ ಮಾಲೀಕರು ಸಂಕಷ್ಟ ಎದುರಿಸುವಂತಾಗಿದೆ. ಇದರಿಂದಾಗಿ ಒಂದು ತಿಂಗಳ ಕಾಲ ಕನ್ನಡ ಚಿತ್ರರಂಗವನ್ನು ಬಂದ್ ಮಾಡಬೇಕೆಂದು ಕರ್ನಾಟಕ ವಾಣಿಜ್ಯ ಮಂಡಳಿಗೆ ಸಹ ನಿರ್ಧರಿಸಿದೆ.
 

Post a comment

No Reviews