
ಧಾರವಾಡ: ಕ್ರಾಂತಿವೀರ ಸಂಗೊಳ್ಳಿ ರಾಯಣ್ಣ ಮತ್ತು ರೈತ ಮುಖಂಡನೋರ್ವರ ಮೂರ್ತಿಗಳನ್ನು ಕಿಡಿಗೇಡಿಗಳು ಭಗ್ನಗೊಳಿಸಿದ ಘಟನೆಯು ಮಂಗಳವಾರ ತಡರಾತ್ರಿ ಜಿಲ್ಲೆಯ ನವಲಗುಂದ ತಾಲೂಕಿನ ಅಳಗವಾಡಿ ಗ್ರಾಮದಲ್ಲಿ ನಡೆದಿದೆ.
ಬಸಪ್ಪ ಲಕ್ಕುಂಡಿ ಎನ್ನುವ ಹುತಾತ್ಮ ರೈತನ ಮೂರ್ತಿಯನ್ನು ಭಗ್ನಗೊಳಿಸಿದ್ದಲ್ಲದೆ, ಗ್ರಾಮದ ಬಸ್ ನಿಲ್ದಾಣದ ಎದುರಿಗಿದ್ದ ಸಂಗೊಳ್ಳಿ ರಾಯಣ್ಣನ ಮೂರ್ತಿಯನ್ನು ಸಹ ಕಿಡಿಗೇಡಿಗಳು ಹಾನಿಗೊಳಿಸಿದ್ದಾರೆ. ಅಳಗವಾಡಿ ಗ್ರಾಮದಲ್ಲಿದ್ದ ಬಸಪ್ಪ ಲಕ್ಕುಂಡಿ ಎಂಬ ರೈತ ಮುಖಂಡನ ಮೂರ್ತಿ ಮತ್ತು ರಾಯಣ್ಣನ ಮೂರ್ತಿ, ಖಡ್ಗ ಹಾಗೂ ಕೆಲ ಭಾಗದಲ್ಲಿ ಕಿಡಿಗೇಡಿಗಳು ಭಗ್ನ ಮಾಡಿದ್ದಾರೆ.
ನವಲಗುಂದ ಪೊಲೀಸರಿಗೆ ಸ್ಥಳೀಯರು ಮಾಹಿತಿ ನೀಡಿದ್ದರು. ವಿಷಯ ತಿಳಿದು ಸ್ಥಳಕ್ಕೆ ಆಗಮಿಸಿದ ಪೊಲೀಸರು ಸದ್ಯ ಭಗ್ನವಾಗಿರೋ ಮೂರ್ತಿಗಳಿಗೆ ಬಟ್ಟೆ ಸುತ್ತಿದ್ದಾರೆ. ಈ ಕೃತ್ಯವೆಸಗಿದವರ ವಿರುದ್ಧ ಕಾನೂನು ಕ್ರಮ ಕೈಗೊಳ್ಳುವಂತೆ ಸ್ಥಳೀಯರು ಒತ್ತಾಯಿಸಿದ್ದಾರೆ.
Poll (Public Option)

Post a comment
Log in to write reviews