
ಬಾಂಗ್ಲಾದೇಶ : ಹಿಂದೂ ವಿದ್ಯಾರ್ಥಿಗಳಿಗೆ ಹಿಜಾಬ್ ಧರಿಸಲು ಮತ್ತು ಖುರಾನ್ ಪದ್ಯಗಳನ್ನು ಕಂಠಪಾಠ ಮಾಡಲು ಒತ್ತಾಯಿಸುತ್ತಿದ್ದ ಮುಸ್ಲಿಂ ಉದ್ದೀನ್ ಬಾಲಕಿಯರ ಪ್ರೌಢಶಾಲೆಯ ಮುಖ್ಯೋಪಾಧ್ಯಾಯರ ವಿರುದ್ಧ ಹಿಂದೂ ವಿದ್ಯಾರ್ಥಿನಿಯರು ಬೃಹತ್ ಪ್ರತಿಭಟನೆ ನಡೆಸಿದ್ದಾರೆ.
ಇನ್ನು ಉದ್ದೀನ್ ಬಾಲಕಿಯರ ಪ್ರೌಢಶಾಲೆಯ ಮುಖ್ಯೋಪಾಧ್ಯಾಯ ಕೆಲ ಹಿಂದೂ ವಿದ್ಯಾರ್ಥಿಗಳನ್ನು ಹಿಜಾಬ್ ಧರಿಸಲು ಮತ್ತು ಖುರಾನ್ ಪದ್ಯಗಳನ್ನು ಕಂಠಪಾಠ ಮಾಡಲು ಒತ್ತಾಯಿಸಲಾಗುತ್ತಿದ್ದ ಎಂದು ಹಿಂದೂ ವಿದ್ಯಾರ್ಥಿಗಳು ಗಂಭೀರ ಆರೋಪ ಮಾಡಿದ್ದಾರೆ.
ಇನ್ನೂ ಶಾಲೆಯಲ್ಲಿ ಕಲವಾ(ಕೇಸರಿ ದರ) ಧರಿಸುವುದನ್ನು ನಿಷೇಧಿಸಲಾಗಿದೆ. ಮತ್ತು ಶಿಕ್ಷಕರು ಮೂರ್ತಿ ಪೂಜೆಯನ್ನು ವ್ಯಂಗ್ಯವಾಗಿ ನಿಂದಿಸುತ್ತಾರೆ ಎಂದು ಆರೋಪಿಸಿ ಬೃಹತ್ ಪ್ರತಿಭಟನೆ ನಡೆಸಿದ್ದಾರೆ.
ಸದ್ಯ ಹಿಂದೂ ಹುಡುಗಿಯರ ತೀವ್ರ ಪ್ರತಿಭಟನೆಯ ನಂತರ ಶಾಲೆಯ ಮುಖ್ಯೋಪಾಧ್ಯಾಯರನ್ನು ಅಮಾನತುಗೊಳಿಸುವಂತೆ ಅಲ್ಲಿನ ಸರ್ಕಾರ ಆದೇಶಿಸಿದೆ.
Poll (Public Option)

Post a comment
Log in to write reviews