ಲೈಂಗಿಕ ಕಿರುಕುಳ ನೀಡುತ್ತಿದ್ದ ಜಮೀನ್ದಾರನನ್ನು ೧೩ ವರ್ಷದ ಬಾಲಕಿಯೊಬ್ಬಳು ಕೊಲೆ ಮಾಡಿರುವ ಘಟನೆ ಉತ್ತರ ಪ್ರದೇಶದಲ್ಲಿ ನಡೆದಿದೆ. ಈ ಘಟನೆ ಮೂರು ತಿಂಗಳ ಹಿಂದೆ ನಡೆದಿದ್ದು, ಪೊಲೀಸರು ರಹಸ್ಯವನ್ನು ಭೇದಿಸಿ ಆರೋಪಿಗಳನ್ನು ಬಂಧಿಸಿದ್ದಾರೆ
ಜಮೀನ್ದಾರ ಶ್ಯಾಮ್ ಚಂದ್ರ ಗುಪ್ತಾ ಅಪ್ರಾಪ್ತ ಬಾಲಕಿಗೆ ಪದೇ ಪದೇ ಲೈಂಗಿಕ ಕಿರುಕುಳ ನೀಡುತ್ತಿದ್ದ. ಅವನ ಆ ಕೃತ್ಯದಿಂದ ಬೇಸತ್ತ ಯುವತಿ ತನ್ನ ಪ್ರೇಮಿ ಬಂಟಿ ಎನ್ನುವವನಿಗೆ ಈ ವಿಷಯವನ್ನು ತಿಳಿಸಿದ್ದಳು.
ಆನಂತರ ಇಬ್ಬರು ಪ್ಲಾನ್ ಮಾಡಿ ಆತನ ಕತ್ತು ಕೊಯ್ದು, ನಂತರ ಶವವನ್ನು ಬೆಡ್‌ಶೀಟ್ ಕವರ್‌ನಲ್ಲಿ ತುಂಬಿ ಮನೆಯ ಹಿಂದಿನ ಚರಂಡಿಗೆ ಎಸೆದಿದ್ದಾರೆ ಎಂದು ಪೊಲೀಸರು ತಿಳಿಸಿದ್ದಾರೆ.
Post a comment
Log in to write reviews