2024-12-24 07:29:16

News broadcasting is the medium of broadcasting various news events and other information via television, radio, or the internet in the field of broadcast journalism.

Get In Touch

  • info@samayanews.tv
  • 8050000444
  • Samaya News, 48, 2nd Floor, 2nd Main, 2nd Cross, Ganganagar, Muthappa Block, RT Nagar, Bengaluru, Karnataka 560032

ಬಿಬಿಎಂಪಿ ವಿರುದ್ದ ಸಿಡಿದೆದ್ದ ಮಾಜಿ .ಸಚಿವ..

ಬಿಬಿಎಂಪಿ ಯಡವಟ್ಟಿಗೆ ಮಾಜಿ ಶಿಕ್ಷಣ ಸಚಿವ ಸುರೇಶ ಕುಮಾರ ಆಕ್ರೋಶ ವ್ಯಕ್ತ ಪಡಿಸಿದ್ದಾರೆ. ಸಾಮಾಜಿಕ ಜಾಲತಾಣದಲ್ಲಿ ಬಿಬಿಎಂಪಿ ವಿರುದ್ಧ ಕಿಡಿ ಕಾರಿದ್ದಾರೆ.

ಶಿಕ್ಷಕರ ಮತ್ತು ಸೇವಾ ಪೂರೈಕೆ ಮಾಡಲು ಸೆಕ್ಯುರಿಟಿ ಏಜೆನ್ಸಿಗೆ ಗುತ್ತಿಗೆ ನೀಡಿರುವುದು ಎಂತಹ ಸ್ಥಿತಿಗೆ  ತಲುಪಿದೆ ಎಂದು ಪ್ರಶ್ನಿಸಿದ್ದಾರೆ.

ಬಿಬಿಎಂಪಿದು ವಿಚಿತ್ರ ವೈಖರಿ ಎಂದು ಅಸಮಾಧಾನ ಹೊರಹಾಕಿದ   ಮಾಜಿ ಸಚಿವ ಸುರೇಶ ಕುಮಾರ

 #ಶಿಕ್ಷಕರ_ಸೇವೆ_ಪೂರೈಸಲು_ಸೆಕ್ಯೂರಿಟಿ_ಏಜೆನ್ಸಿಗೆ_ಗುತ್ತಿಗೆ"

ಈ ಹಿಂದೆಯೂ ಈ ವಿಚಾರವನ್ನು ರಾಜ್ಯದ ಉಪಮುಖ್ಯಮಂತ್ರಿಗಳ ಗಮನಕ್ಕೆ ಹಾಗೂ ಬಿಬಿಎಂಪಿಯ ಮುಖ್ಯ ಆಯುಕ್ತರ ಗಮನಕ್ಕೆ ತಂದಿದ್ದೆ ಎಂದರು.

 ಆಗ ಅದನ್ನು ಪರಿಶೀಲಿಸುವುದಾಗಿ ಹೇಳಿ ಪ್ರಕ್ರಿಯೆಯನ್ನು ಸ್ಥಗಿತ ಸ್ಥಗಿತಗೊಳಿಸಲಾಯ್ತು. ಆದರೆ, ಇದೀಗ  ಮತ್ತೆ ಅದೇ ಹುಚ್ಚು ಅಥವಾ ಹಾಸ್ಯಾಸ್ಪದ ಪ್ರಯತ್ನ ಎಂದು ಸುರೇಶ ಕುಮಾರ ಕಿಡಿಕಾರಿದ್ದರೆ.

ಬಿಬಿಎಂಪಿ ಹೊರ ಗುತ್ತಿಗೆ ಶಿಕ್ಷಕರ  ಸೇವಾ ಪೂರೈಕೆ ಮಾಡಲು 3 ಸೆಕ್ಯೂರಿಟಿ ಏಜೆನ್ಸಿ ಪರವಾನಗಿ ನಿಡಿರುವುದು ತಪ್ಪು ನಿರ್ಣಯ ಎಂದ ಅವರು, ಬಿಬಿಎಂಪಿ ಹೊರಗುತ್ತಿಗೆ ಶಿಕ್ಷಕರ ಸೇವಾ ಪೂರೈಕೆ ಮಾಡಲು ಮೂರು ಸೆಕ್ಯೂರಿಟಿ ಏಜೆನ್ಸಿ ಗುತ್ತಿಗೆ ನೀಡಿದೆ. ಆರ್ಥಿಕವಾಗಿ ಹಿಂದುಳಿದ ಕುಟುಂಬದ ಮಕ್ಕಳು ಸರ್ಕಾರಿ ಶಾಲೆ ಮತ್ತು ಬಿಬಿಎಂಪಿ ಶಾಲೆಯಲ್ಲಿ ವಿದ್ಯಾಭ್ಯಾಸ ಮಾಡಲು ಬರುತ್ತಾರೆ

ಬಿಬಿಎಂಪಿ 700ಕ್ಕೂ ಹೆಚ್ಚು ಹೊರಗುತ್ತಿಗೆ ಶಿಕ್ಷಕರು ಕೆಲಸ ಮಾಡುತ್ತಿದ್ದಾರೆ. ಭದ್ರತೆಗೆ ಸಿಬ್ಬಂದಿ ನೇಮಿಸುವ ಮೂರು ಸೆಕ್ಯೂರಿಟಿ ಏಜೆನ್ಸಿಗಳಿಗೆ ಯಾವ ಮಾನದಂಡ ಅನುಸಾರ ಗುತ್ತಿಗೆ ನೀಡಿದರು ಎಂಬುದು ಯಕ್ಷ ಪ್ರಶ್ನೆಯಾಗಿದೆ. ಶಿಕ್ಷಕರು ನೇಮಿಸಿಕೊಳ್ಳಲು, ಸೇವೆ ಒದಗಿಸಲು  ಶಿಕ್ಷಣ ಕ್ಷೇತ್ರದ ಅರಿವು ಇರುವವರು ಮತ್ತು ನುರಿತ ಏಜೆನ್ಸಿರವರಿಗೆ ನೀಡಬೇಕು. ಅದರೆ ಸೆಕ್ಯೂರಿಟಿ ಏಜೆನ್ಸಿ ನೀಡಿರುವುದು ಬಿಬಿಎಂಪಿಯ ವಿಚಿತ್ರ ವೈಖರಿಯಾಗಿದೆ. ಮತ್ತು ಇದು ಬೇಜವಾದ್ದಾರಿತನ ಎದ್ದು ಕಾಣುತ್ತದೆ ಎಂದು ಪಾಲಿಕೆಯ ಅಧಿಕಾರಿಗಳ ಮೇಲೆ ಹರಿ ಹಾಯ್ದರು. ಸೆಕ್ಯೂರಿಟಿ ಸರ್ವಿಸಸ್ ಸಂಸ್ಥೆಗಳು ಶಿಕ್ಷಕರ ಅರ್ಹತೆ ಮತ್ತು ಶಿಕ್ಷಕರು ಶಾಲೆಯಲ್ಲಿ ಪಾಠ ಮಾಡುವುದು ಮತ್ತು ನಡವಳಿಕೆ ಮಾಪನ ಮಾಡಲು ಸಾಧ್ಯವೆ ಇರುವುದಿಲ್ಲಾ  ಸೆಕ್ಯೂರಿಟಿ ಏಜೆನ್ಸಿಗೂ ಶಿಕ್ಷಕರ ಸೇವಾ ಪೂರೈಕೆಗೆ  ಎತ್ತಣ  ಸಂಬಂಧ..ಶಾರ್ಪ್ ವಾಚ್ ಇನ್ ವೆಸ್ಟಿಂಗ್ ಸೆಕ್ಯೂರಿಟಿ ಸರ್ವಿಸಸ್ ಪ್ರೈ ಲಿಮಿಟಿಡ್ ಮೈಸೂರು ನಗರದಲ್ಲಿ ಕಛೇರಿ ಹೊಂದಿದೆ.  ಶಿಕ್ಷಕರು ಇ.ಎಸ್.ಐ.ಮತ್ತು ಪಿ.ಎಫ್ ಏನಾದರು ಸಹಿ, ಸಮಸ್ಯೆ ಬಗೆಹರಿಸಲು ಮೈಸೂರಿಗೆ ಹೋಗುವ ಪರಿಸ್ಥಿತಿ ಬರುತ್ತದೆ ಇದು ಅಸಹಜ ಪ್ರಕ್ರಿಯೆ  ಎಂದು ಸುರೇಶ ಕುಮಾರ ನುಡಿದರು.

Post a comment

No Reviews