ಕರ್ನಾಟಕ
ಜಲಾವೃತಗೊಂಡ ಮನೆಯಲ್ಲಿ ಸಾವಿನಂಚಿಗೆ ಸಿಲುಕಿದ್ದ ವೃದ್ಧನ ರಕ್ಷಣೆ ಮಾಡಿದ ಅಗ್ನಿಶಾಮಕ ದಳ

ಉಡುಪಿ : ಮಹಾಬಲ ಶೆಟ್ಟಿ ಎಂಬುವವರು ಜಲಾವೃತಗೊಂಡು ಮನೆಯಲ್ಲಿ ಸಾವಿನ ಅಂಚಿಗೆ ಸಿಲುಕಿಕೊಂಡಿದ್ದ ಘಟನೆ ಜಿಲ್ಲೆಯ ಅಚ್ಲಾಡಿ ಎಂಬ ಗ್ರಾಮದಲ್ಲಿ ಸಂಭವಿಸಿದೆ.
ರಾಜ್ಯದಲ್ಲಿ ವರುಣನ ಆರ್ಭಟ ಜೋರಾಗಿದೆ. ಎಡೆಬಿಡದೇ ಸುರಿಯುತ್ತಿರೋ ಮಳೆಯಿಂದ ಕರಾವಳಿಯಲ್ಲಿ ಭಾರೀ ಅನಾಹುತವನ್ನೇ ವರುಣ ಸೃಷ್ಟಿಸಿದ್ದಾನೆ. ನೆರೆ ಹಿನ್ನೆಲೆ ಮನೆ ಜಲಾವೃತಗೊಂಡ ಬಳಿಕ ಜಿಲ್ಲೆಯ ಬ್ರಹ್ಮಾವರ ತಾಲೂಕು ಅಚ್ಲಾಡಿಯ ಮಹಾಬಲ ಶೆಟ್ಟಿ ಎಂಬುವವರಿಗೆ ಉಸಿರಾಟದ ಸಮಸ್ಯೆ ಕಾಣಿಸಿಕೊಂಡಿದೆ.
ಉಸಿರಾಟದ ಸಮಸ್ಯೆಯಿಂದ ಬಳಲಿದ ವೃದ್ಧರೊಬ್ಬರನ್ನು ಜಲಾವೃತಗೊಂಡ ಮನೆಯಿಂದ ಅಗ್ನಿಶಾಮಕ ದಳದ ನೆರವಿನಿಂದ ಆಸ್ಪತ್ರೆಗೆ ದಾಖಲು ಮಾಡಲಾಗಿದೆ. ಸ್ಥಳೀಯರು ರಕ್ಷಣಾ ಕಾರ್ಯಕ್ಕೆ ಸಾಥ್ ನೀಡಿದ್ರು. ಆಸ್ಪತ್ರೆಗೆ ದಾಖಲಿಸಿದ ಬಳಿಕ ಮಹಾಬಲ ಶೆಟ್ಟಿ ಚೇತರಿಸಿಕೊಂಡಿದ್ದಾರೆ.
Poll (Public Option)

Post a comment
Log in to write reviews