2024-12-24 06:30:20

News broadcasting is the medium of broadcasting various news events and other information via television, radio, or the internet in the field of broadcast journalism.

Get In Touch

  • info@samayanews.tv
  • 8050000444
  • Samaya News, 48, 2nd Floor, 2nd Main, 2nd Cross, Ganganagar, Muthappa Block, RT Nagar, Bengaluru, Karnataka 560032

ಕರುಳ ಬಳ್ಳಿ ಬಲಿ ಪಡೆದ ತಂದೆ

ಉತ್ತರಪ್ರದೇಶ: ʻಕಾರ್ಯೇಶು ದಾಸಿ.. ಕರುಣೇಶು ಮಂತ್ರಿ.. ರೂಪೇಶು ಲಕ್ಷ್ಮೀ.. ಕ್ಷಮಯಾ ಧರಿತ್ರಿ..ʼ ಹೆಣ್ಣನ್ನ ಹೀಗೆ ಶತ-ಶತಮಾನಗಳಿಂದಲೂ ವರ್ಣಿಸಿ ಗೌರವಿಸಲಾಗುತ್ತದೆ.. ಹೆಣ್ಣಿಗೆ ವಿಶೇಷ ಸ್ಥಾನ ನೀಡಲಾಗುತ್ತದೆ. ಅದರಲ್ಲೂ ಹೆಣ್ಣು ಮಗು ಜನಿಸಿದಾಗ ʻಮನೆಗೆ ಮಹಾಲಕ್ಷ್ಮೀ ಬಂದ್ಲುʼ ಅಂತಾ ಎಷ್ಟೋ ಪೋಷಕರು ಖುಷಿಪಡುತ್ತಾರೆ. ಆದರೆ ಉತ್ತರಪ್ರದೇಶದ ಇಟಾವಾ ನಗರದಲ್ಲಿ ತಂದೆಯೇ ಹೆಣ್ಣು ಮಗುವನ್ನು ನೆಲಕ್ಕೆ ಬಡಿದು ಮರ್ಡರ್ ಮಾಡಿದ್ದಾನೆ.

ಹೆಣ್ಣು ಮಗು ಹತ್ಯೆಗೈದ ತಂದೆ ಹೆಸರು ದಿವಾಕರ್ ಅಂತ. ಕೊಲೆಗಡುಕ ದಿವಾಕರ್‌ ಮೊದಲನೇ ಪತ್ನಿಗೆ ಎರಡು ಹೆಣ್ಣು ಮಕ್ಕಳಿವೆ. ಆದರೆ ಆರೋಗ್ಯ ಸಮಸ್ಯೆಯಿಂದ ಮೊದಲ ಮಡದಿ ಕೊನೆಯುಸಿರೆಳೆಯುತ್ತಿದ್ದಂತೆ ದಿವಾಕರ್‌ ಎರಡನೇ ವಿವಾಹವಾಗಿದ್ದ. ಎರಡನೇ ಪತ್ನಿಗೂ ಮೊದಲು ಹೆಣ್ಣು ಮಗು ಜನಿಸಿದ್ದು, ಎರಡನೇ ಮಗು ಕೂಡ ಹೆಣ್ಣಾಗಿತ್ತು. ಇದರಿಂದ ಸಿಟ್ಟಿಗೆದ್ದ ದಿವಾಕರ್ ಶಿಶುವನ್ನ ನೆಲಕ್ಕೆ ಎಸೆದು ಕೊಂದಿದ್ದಾನೆ. ಗಂಡು ಮಗು ಆಗಲಿ ಅಂತ ಪಾರ್ಥಿಸುತ್ತಿದ್ದ ದಿವಾಕರ್‌, ಹೆಣ್ಣು ಮಗು ಜನಿಸ್ತಿದ್ದಂತೆ ಸಿಟ್ನ್ನು ನೆತ್ತಿಗೆ ಏರಿಸಿಕೊಂಡಿದ್ದ.

ಕುಡಿದ ನಶೆಯಲ್ಲಿದ್ದ ಕ್ರೂರಿ ದಿವಾಕರ್, ಮಗುವನ್ನು ಹತ್ಯೆಗೈದಿದ್ದಾನೆ. ಸದ್ಯ ಪತ್ನಿ ಕೊಟ್ಟ ದೂರಿನಂತೆ ಪೊಲೀಸರು ಹಂತಕ ದಿವಾಕರ್‌ನನ್ನ ಅರೆಸ್ಟ್‌ ಮಾಡಿದ್ದಾರೆ.

Post a comment

No Reviews