
ರಾಮನಗರ: ಬುದ್ಧಿವಾದ ಹೇಳಲು ಮುಂದಾದ ವೃದ್ಧನ ಕುತ್ತಿಗೆ ಕೊಯ್ದು ನಟ ದರ್ಶನ್ ಅಭಿಮಾನಿಗಳು ಪರಾರಿಯಾದ ಘಟನೆ ರಾಮನಗರ ಜಿಲ್ಲೆಯ ಸೂಲಿಕೆರೆಪಾಳ್ಯದಲ್ಲಿ ಘಟನೆ ನಡೆದಿದೆ. ಸೂಲಿಕೆರೆ ಕಟ್ಟಡವೊಂದು ನಿರ್ಮಾಣ ಮಾಡಲಾಗುತ್ತಿತ್ತು. ಆ ಕಟ್ಟಡದ ಮೇಸ್ತ್ರಿ ವೆಂಕಟಸ್ವಾಮಿ ನಿರ್ಮಾಣವಾಗುತ್ತಿರುವ ಕಟ್ಟಡದ ಬಳಿಯೇ ಸಣ್ಣದೊಂದು ಶೆಡ್ ಹಾಕಿಕೊಂಡು ಇತರೆ ಕೆಲ ಕೆಲಸಗಾರರ ಜೊತೆಗೆ ವಾಸವಿದ್ದರು.
ಶೆಡ್ ಬಳಿ ಕೆಲ ಆರೋಪಿಗಳು ದರ್ಶನ್ ಬಗ್ಗೆ ಮಾತನಾಡುತ್ತಿದ್ದರು. ಅಲ್ಲದೇ 'ಡಿ-ಬಾಸ್' ಎಂದು ಘೋಷಣೆ ಕೂಗಲು ಪ್ರಾರಂಭಿಸಿದರು. ಆಗ ಶೆಡ್‌ನಲ್ಲಿ ಮಲಗಿದ್ದ ವೆಂಕಟಸ್ವಾಮಿ, ಯಾಕೆ ಹೀಗೆ ಕೂಗುತ್ತೀರಿ, ಇಲ್ಲೆಲ್ಲ ಮನೆಗಳಿವೆ, ಬೇರೆ ಕಡೆ ಹೋಗಿ ಎಂದು ಬುದ್ಧಿವಾದ ಹೇಳಿದ್ದಾರೆ. ಇಷ್ಟಕ್ಕೆ ಸಿಟ್ಟಾದ ಇಬ್ಬರು ದರ್ಶನ್ ಅಭಿಮಾನಿಗಳು, ಏನೋ ದರ್ಶನ್ ಬಗ್ಗೆ ಮಾತನಾಡುತ್ತೀಯಾ? ಅವರ ಬಗ್ಗೆ ನಿನಗೇನು ಗೊತ್ತು? ಎಂದು ಕೂಗಾಡುತ್ತಾ ಹಲ್ಲೆ ಮಾಡಿದ್ದಾರೆ. ದರ್ಶನ್ ಅಭಿಮಾನಿ ಕಿರಣ ಎಂಬಾತ ಚಾಕು ತೆಗೆದುಕೊಂಡು ವೆಂಕಟಸ್ವಾಮಿಯ ಕತ್ತು ಕೊಯ್ದಿದ್ದಾನೆ. ಕೂಡಲೇ ಸ್ಥಳಕ್ಕೆ ಬಂದ ಕಾಳಯ್ಯ ಎಂಬವರು ಜಗಳ ಬಿಡಿಸಿದ್ದಾರೆ. ಇತ್ತ ಕತ್ತಿಗೆಯಿಂದ ರಕ್ತಸ್ರಾವವಾಗಿದ್ದ ವೆಂಕಟಸ್ವಾಮಿಯನ್ನು ಕೂಡಲೇ ಆಸ್ಪತ್ರೆಗೆ ದಾಖಲಿಸಲಾಗಿದೆ. ಸಕಾಲಕ್ಕೆ ಚಿಕಿತ್ಸೆ ದೊರೆತ ಕಾರಣ ವೆಂಕಟಸ್ವಾಮಿ ಪ್ರಾಣಾಪಾಯದಿಂದ ಪಾರಾಗಿದ್ದಾರೆ. ಇನ್ನೂ ಘಟನೆ ಬಳಿಕ ಆರೋಪಿಗಳಾದ ಕಿರಣ್ ಹಾಗೂ ಮಹದೇವ್ ಇಬ್ಬರು ಪರಾರಿಯಾಗಿದ್ದಾರೆ. ಘಟನೆ ಕುರಿತು ಕುಂಬಳಗೋಡು ಪೊಲೀಸ್ ಠಾಣೆಯಲ್ಲಿ ದೂರು ದಾಖಲಾಗಿದೆ.
Poll (Public Option)

Post a comment
Log in to write reviews