
ಬೆಂಗಳೂರು: ನಟ ದರ್ಶನ್ ಅಭಿಮಾನಿಯೊಬ್ಬರು ತನ್ನ ಮಗನಿಗೆ ಖೈದಿ ಡ್ರೆಸ್ ಹಾಕಿ ಫೋಟೋಶೂಟ್ ಮಾಡಿಸಿರೊ ಫೋಟೋ ಸೋಶಿಯಾಲ್ ಮೀಡಿಯಾದಲ್ಲಿ ವೈರಲ್ ಆಗುತ್ತಿದೆ.
ಡಿ ಬಾಸ್ ಫ್ಯಾನ್ಸ್ ಮೈಸರು ಎಂಬ ಸೋಶಿಯಲ್ ಮೀಡಿಯಾ ಖಾತೆ ಮೂಲಕ ಫೋಟೋ ಹಂಚಿಕೊಳ್ಳಲಾಗಿದೆ. ಒಂದು ವರ್ಷದ ಮಗನಿಗೆ ನಟ ದರ್ಶನ್‌ಗೆ ಪೊಲೀಸರು ಕೊಟ್ಟಿರುವ 6106 ಖೈದಿ ಬಟ್ಟೆಯನ್ನು ಹೋಲುವ ರೀತಿಯ ಬಟ್ಟೆ ಹಾಕಿ ಪೋಟೋಶೂಟ್ ಮಾಡಿಸಲಾಗಿದೆ. ದರ್ಶನ್‌ಗೆ ನೀಡಿರೋ ವಿಚಾರಾಣಧೀನ ಖೈದಿ ಸಂಖ್ಯೆಯನ್ನು ಮಗುವಿಗೆ ಹಾಕಲಾಗಿದೆ. ಕೈ ಕೋಳ ಮಾದರಿ ಕೂಡ ಇಡಲಾಗಿದೆ. ಅಲ್ಲಿಯೇ ಜೈ ಡಿಬಾಸ್ ಎಂದು ಬರೆಯಲಾಗಿದೆ. ಇದಕ್ಕೆ ದರ್ಶನ್ ಅಭಿಮಾನಿಗಳು ಸಂತಸ ವ್ಯಕ್ತಪಡಿಸಿದ್ದಾರೆ. ಆದರೆ ಜನಸಾಮಾನ್ಯರು ಈ ಬಗ್ಗೆ ಟೀಕೆ ವ್ಯಕ್ತಪಡಿಸಿದ್ದಾರೆ.
Poll (Public Option)

Post a comment
Log in to write reviews