ಭಾರತ
ಬೆಂಕಿ ದುರಂತದಲ್ಲಿ ಮೃತ ಯುವಕನ ಕುಟುಂಬಕ್ಕೆ 18 ಲಕ್ಷ ಪರಿಹಾರ ನೀಡಿದ ಕಾರ್ಖಾನೆ ಆಡಳಿತ

ಬೆಳಗಾವಿ: ಜಿಲ್ಲೆಯ ನಾವಗೆ ಬಳಿಯ ಸ್ನೇಹಂ ಟೇಪಿಂಗ್ ಕಾರ್ಖಾನೆಯಲ್ಲಿ ಆಗಸ್ಟ್ 06 ರಂದು ಸಂಭವಿಸಿದ ದುರ್ಘಟಯಲ್ಲಿ ಲಿಫ್ಟ್‌ನಲ್ಲಿ ಕಾರ್ಮಿಕ ಯಲ್ಲಪ್ಪ ಗುಂಡ್ಯಾಗೋಳ ಸಜೀವದಹನವಾಗಿದ್ದರು. ಜಿಲ್ಲಾಡಳಿತಕ್ಕೂ ಮೊದಲು ಕಾರ್ಖಾನೆ ಆಡಳಿತ ಮಂಡಳಿ ಮೃತರ ಕುಂಟಕ್ಕೆ 18 ಲಕ್ಷ ರೂ. ಪರಿಹಾರ ನೀಡಿದೆ.
10 ಲಕ್ಷ ರೂ. ಪರಿಹಾರ ಬೇಡ ಅಂತಾ ಮೃತನ ತಂದೆ ಸಣ್ಣಯಲ್ಲಪ್ಪ ಅಳಲು ತೋಡಿಕೊಂಡಿದ್ದರು. ಬಳಿಕ 18 ಲಕ್ಷ ರೂ. ಪರಿಹಾರದ ಚೆಕ್ವನ್ನು ತಂದೆ ಸಣ್ಣಯಲ್ಲಪ್ಪ, ತಾಯಿ ಬಸವ್ವ ಹೆಸರಿನಲ್ಲಿ ಪರಿಹಾರದ ಚೆಕ್ ಅನ್ನು ಸ್ನೇಹಂ ಟೇಪಿಂಗ್ ಕಾರ್ಖಾನೆ ವಿತರಣೆ ಮಾಡಿದೆ.
ಮನೆಯ ಜವಾಬ್ದಾರಿಯನ್ನು ಹೊತ್ತಿದ್ದ ಯುವಕ ಅಕ್ಕನ ಮದುವೆ ಮಾಡಿ ಇನ್ನಿಬ್ಬರ ಸಹೋದರಿಯರ ಓದಿನ ಜವಾಬ್ದಾರಿಯನ್ನೂ ತೆಗೆದುಕೊಂಡಿದ್ದರು ಈ ಘಟನೆಯಲ್ಲಿ ಯಲ್ಲಪ್ಪ ಸಂಪೂರ್ಣ ಸುಟ್ಟು ಕರಕಲು ಆಗಿದ್ದರು.
Poll (Public Option)

Post a comment
Log in to write reviews