
ಕೊಡಗು: ನೀರು ಕುಡಿಯಲು ತೆರಳಿದಾಗ ಕಾಡಾನೆ ಕೆರೆಗೆ ಬಿದ್ದು ಸಾವನ್ನಪ್ಪಿರುವ ಘಟನೆ ಜಿಲ್ಲೆಯ ವಿರಾಜಪೇಟೆ ತಾಲೂಕಿನ ಅಮ್ಮತ್ತಿ ಸಮೀಪ ನಡೆದಿದೆ.
ಶುಕ್ರವಾರ ತಡರಾತ್ರಿ ನಾಲ್ಕು ಕಾಡಾನೆಗಳ ಹಿಂಡು ಕಣ್ಣಂಗಾಲ ಗ್ರಾಪಂ ವ್ಯಾಪ್ತಿಯ ಹಚ್ಚಿನಾಡು ಮುಕ್ಕಾಟರ ನಂದನ ಅವರ ತೋಟದಲ್ಲಿ ಬೀಡುಬಿಟ್ಟಿದ್ದವು. ಆವೇಳೆ ನೀರು ಕುಡಿಯಲು ಕೆರೆಗೆ ತೆರಳಿದ ಸಂದರ್ಭದಲ್ಲಿ ಸುಮಾರು 13 ವರ್ಷದ ಗಂಡಾನೆ ಕಾಲುಜಾರಿ ಕೆರೆಗೆ ಬಿದ್ದಿದೆ. ಕೆರೆಯಲ್ಲಿ ಕೆಸರು ಹೆಚ್ಚಾಗಿರುವುದರಿಂದ ಹೊರಬರಲು ಸಾಧ್ಯವಾಗಿಲ್ಲ ಎಂದು ಅರಣ್ಯ ಇಲಾಖೆ ವೈದ್ಯ ಡಾ.ಚೆಟ್ಟಿಯಪ್ಪ ತಿಳಿಸಿದ್ದಾರೆ.
ಸ್ಥಳಕ್ಕೆ ವಿರಾಜಪೇಟೆ ಡಿಸಿಎಫ್ ಜಗನ್ನಾಥ ಭೇಟಿನೀಡಿ ಪರಿಶೀಲಿಸಿದರು. ಕೆರೆಯಿಂದ ಆನೆ ಕಳೇಬರವನ್ನು ತೆಗೆಸಿ ಮರಣೋತ್ತರ ಪರೀಕ್ಷೆ ಬಳಿಕ ದಂತಗಳನ್ನು ಅರಣ್ಯ ಇಲಾಖೆಗೆ ಹಸ್ತಾಂತರಿಸಲಾಯಿತು.
Poll (Public Option)

Post a comment
Log in to write reviews