
ಬೆಂಗಳೂರಿನಲ್ಲಿ ಹಿಂಬದಿಯಿಂದ ಬಂದು ಫೋನ್‌ನನ್ನು ಕದಿಯುವ ಕಳ್ಳರ ಹಾವಳಿ ಆರಂಭವಾಗಿದೆ. ಇಲ್ಲೊಬ್ಬ ಡೆಲಿವರಿ ಬಾಯ್ ಬೈಕಿನಲ್ಲಿ ಫೋನ್ ಹಿಡಿದು ಮಾತಾಡುತ್ತಾ ಹೆಚ್‌ಎಸ್‌ಆರ್ ಲೇಔಟ್‌ನಲ್ಲಿ ಹೊರಟಿದ್ದರು. ಹಿಂದಿನಿಂದ ಬೈಕ್‌ನಲ್ಲಿ ಬಂದ ಇಬ್ಬರು ಕಳ್ಳರು ಮೊಬೈಲ್ ಕಿತ್ತುಕೊಂಡಿದ್ದು, ಮೊಬೈಲ್ ಕಿತ್ತ ರಭಸಕ್ಕೆ ಡೆಲಿವರಿ ಬಾಯ್ ಆಯತಪ್ಪಿ ರಸ್ತೆಯಲ್ಲಿ ಬಿದ್ದಿದ್ದಾರೆ. ಹಿಂದೆ ಬರುತ್ತಿದ್ದ ಕಾರಿನ ಮಧ್ಯೆ ಸ್ವಲ್ಪ ಅಂತರ ಇದ್ದ ಕಾರಣ ಡೆಲಿವರಿ ಬಾಯ್ ಅವರಿಗೆ ಯಾವುದೇ ಸಮಸ್ಯೆಯಾಗಿಲ್ಲ ಎನ್ನಲಾಗಿದೆ.
ಹೆಚ್ ಎಸ್ ಆರ್ ಲೇಔಟ್ 29ನೇ ಮುಖ್ಯ ರಸ್ತೆಯಲ್ಲಿ ಸೆ.27 ರ ರಾತ್ರಿ ಒಂದು ಗಂಟೆ ಸುಮಾರಿಗೆ ಡೆಲಿವರಿ ಬಾಯ್ ಹಿಂದಿನಿಂದ ಬರುತ್ತಿದ್ದ ಕಾರಿನ ಡ್ಯಾಶ್ ಕ್ಯಾಮೆರಾದಲ್ಲಿ ಈ ದೃಶ್ಯಗಳು ಸೆರೆಯಾಗಿದೆ.
Poll (Public Option)

Post a comment
Log in to write reviews