ಉತ್ತರಾಖಂಡದಲ್ಲಿ ಸಾವನಪ್ಪಿದ ಕನ್ನಡಿಗರ ಸಂಖ್ಯೆ 9 ಕ್ಕೆ ಏರಿಕೆ. ಇಂದು 4 ಶವ ಪತ್ತೆ.

ಉತ್ತರಾಖಂಡದ ಶಾಸ್ತ್ರತಾಳ್ ಗೆ ಚಾರಣಕ್ಕೆಂದು ತೆರಳಿ ಹವಾಮಾನ ವೈಪರೀತ್ಯದಿಂದಾಗಿ ಮೃತ ಪಟ್ಟವರ ಸಂಖ್ಯೆ 9 ಕ್ಕೆ ಏರಿಕೆಯಾಗಿದ್ದು ಇಂದು(ಗುರುವಾರ 6 ಜೂನ್) ಮೃತ ದೇಹಗಳನ್ನ ಕರ್ನಾಟಕಕ್ಕೆ ತರಲಾಗುವುದು ಎಂದು ಕೃಷ್ಣೇ ಭೈರೇಗೌಡ ತಿಳಿಸಿದರು.
ಬುಧವಾರ( 5 ಜೂನ್) ಮೃತ ದೇಹಗಳು ಪತ್ತೆಯಾಗಿದ್ದು ಅವರನ್ನು ಎಸ್ ಸುಧಾಕರ್, ವಿನಯ್ ಎಂ ಕೆ ,ವಿವೇಕ್ ಶ್ರೀಧರ್, ನವೀನ್ ಏ. ರಿತಿಕ ಜಿಂದಲ್ ಎಂದು ಗುರ್ತಿಸಲಾಗಿತ್ತು.
ಬುಧವಾರದಿಂದ ನಿರಂತರ ಕಾರ್ಯಚರಣೆ ಮುಂದುವರೆದಿದ್ದು ಇಂದು ಸಹ ಕರ್ನಾಟಕ ಮೂಲದ 4ಮೃತ ದೇಹಗಳು ಪತ್ತೆಯಾಗಿದೆ. ಪದ್ಮನಾಭ ಕೆ ಪಿ ,ವೆಂಕಟೇಶ್ ಪ್ರಸಾದ್ ಕೆ, ಅನಿತ ರಂಗಪ್ಪ ಪದ್ಮಿನಿ ಹೆಗ್ಡೆ ಮೃತ ದುರ್ದೈವಿಗಳು.
ಒಟ್ಟು 22 ಚಾರಣಿಗಳ ಗುಂಪಲ್ಲಿ ಒಟ್ಟು 12 ಜನರನ್ನ ರಕ್ಷಣೆ ಮಾಡಲಾಗಿದ್ದು ಸೌಮ್ಯ ಕೆನಾಲೆ, ಸ್. ಸೌಮ್ಯಾ ಕೆನಾಲೆ, ಸ್ಮೃತಿ ಡೋಲಾಸ್, ಶೀನಾ ಲಕ್ಷ್ಮಿ, ಎಸ್ ಶಿವ ಜ್ಯೋತಿ,ಅನಿಲ್ ಜಮತಿಗೆ ಅರುಣಾಚಲ್ಭಟ್, ಭರತ್ ಬೊಮ್ಮನ ಗೌಡರ್, ಮಧು ಕಿರಣ್ ರೆಡ್ಡಿ, ಜೈಪ್ರಕಾಶ್ ಬಿ.ಎಸ್. ಸೌಮ್ಯಾ ಕೆನಾಲೆ, ಎಸ್ ಸುಧಾಕರ್, ವಿನಯ್ ಎಂ.ಕೆ,ವಿವೇಕ್ ಶ್ರೀಧರ್, ನವೀನ್, ರಿತಿಕಾ ಜಿಂದಾಲ್ ರಕ್ಷಿಣೆ ಮಾಡಲಾಗಿದ್ದು ಇಂದು ಬೆಳಗ್ಗೆ 11 ಗಂಟೆಗೆ ಉತ್ತರಕಾಶಿಯಿಂದ ಡೆಹ್ರಾಡೂನ್‌ಗೆ ವಿಮಾನದಲ್ಲಿ ಕಳುಹಿಸಲಾಗಿದೆ.
Poll (Public Option)

Post a comment
Log in to write reviews