
ಬಾಗಲಕೋಟೆ: ಮಗು ಮೃತಪಟ್ಟಿದೆ ಎಂದು ಪೋಷಕರು ತಮ್ಮ ಸಂಬಂಧಿಕರು, ಆಪ್ತರಿಗೆ ತಿಳಿಸಿ ಅಂತ್ಯಸಂಸ್ಕಾರಕ್ಕೆ ಸಿದ್ಧತೆ ನಡೆಸಿದ್ದರು. ಇನ್ನೇನು ಅಂತ್ಯಸಂಸ್ಕಾರ ಮಾಡಬೇಕು ಅನ್ನೋ ವೇಳೆಗೆ ಮಗು ಕಣ್ಣು ಬಿಟ್ಟಿದೆ. ಇದನ್ನ ಕಂಡು ನೆರೆದಿದ್ದವರು ಗಾಬರಿಯಾಗಿದ್ದಾರೆ. ಮಗು ಜೀವಂತವಿರುವದನ್ನ ಕಂಡು ಮಗುವಿನ ಪೊಷಕರು ತಕ್ಷಣ ಆ ಮಗುವನ್ನ ಆಸ್ಪತ್ರೆಗೆ ದಾಖಲಿಸಿ ಚಿಕಿತ್ಸೆ ಕೊಡಿಸಲು ಮುಂದಾಗಿದ್ದಾರೆ. ಇಳಕಲ್ ನಗರದ ದ್ಯಾಮಣ್ಣ ಭಜಂತ್ರಿ ಎಂಬ 13 ತಿಂಗಳ ಮಗು ಪವಾಡದ ರೀತಿಯಲ್ಲಿ ಬದುಕುಳಿದಿದ್ದು ಪೋಷಕರು ಸಂತಸವಾಗಿದ್ದಾರೆ. ಅಂತ್ಯಸಂಸ್ಕಾರಕ್ಕೆ ಬಂದ ಪೋಷಕರು ಮಗುವನ್ನು ದರ್ಗಾಗೆ ಕರೆದುಕೊಂಡು ಹೋಗಿ ದೇವರ ಆರ್ಶೀವಾದ ಪಡೆದು ಆಸ್ಪತ್ರೆಗೆ ದಾಖಲು ಮಾಡಿದ್ದಾರೆ. ಈ ಮಗುವಿಗೆ ಹುಟ್ಟಿದಾಗಿನಿಂದ ಉಸಿರಾಟ, ಹೃದಯ ಸಂಬಂಧಿ ತೊಂದರೆ ಸೇರಿದಂತೆ ಬಹುಅಂಗಾಂಗ ವೈಫಲ್ಯದಿಂದ ಬಳಲುತಿತ್ತು. ಮಗುವಿನ ಪೊಷಕರು ಅನಾರೋಗ್ಯದ ಕಾರಣ ಕಳೆದ ನಾಲ್ಕು ದಿನಗಳಿಂದ ಬಾಗಲಕೋಟೆಯ ಖಾಸಗಿ ಆಸ್ಪತ್ರೆಗೆ ಮಗುವನ್ನು ದಾಖಲಿಸಿ ಚಿಕಿತ್ಸೆ ಕೊಡಿಸಿದ್ದಾರೆ. ವೈದ್ಯರು ಮಗುವಿನ ಆರೋಗ್ಯಪರಿಸ್ಥಿತಿ ಕಂಡು ಬದುಕೋದು ಕಷ್ಟ ಎಂದು ಹೇಳಿದ್ದರಂತೆ. ಇದರಿಂದ ನೊಂದ ಪೋಷಕರು ಮಗುವನ್ನು ಮನೆಗೆ ವಾಪಸ್ ಕರೆತಂದಿದ್ದಾರೆ. ಆದರೆ ಮಾರ್ಗ ನಡುವೆಯೇ ಮಗು ಪ್ರಜ್ಞೆ ತಪ್ಪಿದಂತಾಗಿದೆ, ಇದನ್ನ ಗಮನಿಸಿದ ಮಗುವಿನ ಪೋಷಕರು ಮಗು ಮೃತಪಟ್ಟಿದೆ ಎಂದು ತಿಳಿಸಿದು ಮಗುವಿನ ಅಂತ್ಯಸಂಸ್ಕಾರಕ್ಕೆ ಮುಂದಾಗಿದ್ದಾರೆ, ಆದರೆ ಮಗು ಪವಾಡದ ರೀತಿಯಲ್ಲಿ ಬದುಕುಳಿದಿದೆ. ಸದ್ಯ ಈ ಮಗುವಿಗೆ ಇಳಕಲ್ ಖಾಸಗಿ ಆಸ್ಪತ್ರೆಯಲ್ಲಿ ಚಿಕಿತ್ಸೆ ನೀಡಲಾಗುತ್ತಿದೆ.
Poll (Public Option)

Post a comment
Log in to write reviews