ಕೊರಳಪಟ್ಟಿ ಹಿಡಿದು ಪ್ರಶ್ನಿಸುತ್ತಲೇ ಇದ್ದರಷ್ಟೇ ದೇಶ ಕಾಪಾಡಿಕೊಳ್ಳಲು ಸಾಧ್ಯ – ನಟ ಕಿಶೋರ್

ಮತ್ತೆ ದೇಶವನ್ನು ಪ್ರಗತಿಯ ಹಾದಿಗೆ ತರಲು ದಶಕಗಳೇ ಬೇಕು. ಹಾಗಾಗಿ ಯಾರು ಅಧಿಕಾರಕ್ಕೆ ಬಂದರೂ ಚುನಾವಣೆಯ ನಂತರವೂ ನಾವು ಜಾಗೃತರಾಗಿದ್ದು ರಾಜಕಾರಣಿಗಳ ಕೊರಳಪಟ್ಟಿ ಹಿಡಿದು ಪ್ರಶ್ನಿಸುತ್ತಲೇ ಇದ್ದರಷ್ಟೇ ದೇಶವನ್ನು ಕಾಪಾಡಿಕೊಳ್ಳಲು ಸಾಧ್ಯ ಎಂದು ನಟ ಕಿಶೋರ್ ಅಭಿಪ್ರಾಯಪಟ್ಟಿದ್ದಾರೆ.
ಈ ಕುರಿತು ತಮ್ಮ ಫೇಸ್ ಬುಕ್ ನಲ್ಲಿ ಬರೆದುಕೊಂಡಿರುವ ಅವರು, ನಮಗ್ಯಾಕೆ ಬೇಡದ ರಾಜಕೀಯ?. ಇದು ಸಾಮಾನ್ಯವಾಗಿ ಎಲ್ಲೆಡೆ ಕೇಳುವ ಮಾತು. ಚುನಾವಣೆ ಮುಗಿದಿದೆ, ನಾವು ಜವಾಬ್ದಾರಿಯುತ ಪ್ರಜೆಯಂತೆ ಓಟು ಹಾಕಿ ಮುಗಿಸಿದ್ದೇವೆ, ಸೋಷಿಯಲ್ ಮೀಡಿಯಾದಲ್ಲಿ ಬೆರಳ ಇಂಕಿನ ಫೋಟೋ ಹಾಕಿ ಹೆಮ್ಮೆ ಪಟ್ಟಿದ್ದೇವೆ. ಭಾರತೀಯರಾದ ಸಾರ್ಥಕ ಭಾವಕ್ಕೆ ಹರ್ಷ ಪಟ್ಟು ನಿತ್ಯ ಜೀವನದಲ್ಲಿ ತೊಡಗುತ್ತೇವೆ. ಆದರೆ ಮತವನ್ನು ದಾನ ಮಾಡಿ ಕುಳಿತರೆ ದೇಶ ಉದ್ಧಾರವಾಗುವುದಿಲ್ಲ. ಇಷ್ಟು ದಿನ ಹಾಗೆ ಕುಳಿತರೂ ಅದರ ಶಕ್ತಿಗೆ ತಕ್ಕಂತಲ್ಲದಿದ್ದರೂ ಅಲ್ಲಲ್ಲಿ ಯಾರೋ ಪ್ರಾಮಾಣಿಕರ ಪ್ರಯತ್ನದಿಂದ ಕುಂಟುತ್ತಾ ಸಾಗುತ್ತಿತ್ತು. ಆದರಿಂದ ನಮ್ಮ ಪ್ರಜಾಪ್ರಭುತ್ವವೇ ಅಪಾಯದಲ್ಲಿದೆ. ಧರ್ಮದ ಆಧಾರದ ಮೇಲೆ ದೇಶದ ಜನಗಳನ್ನು ಒಡೆಯುವ ಜನ 10 ವರ್ಷದಿಂದ ಅಧಿಕಾರ ಹಿಡಿದಿದ್ದಾರೆ. ದೇಶವನ್ನು ಎಲ್ಲಾ ನಿಟ್ಟಿನಲ್ಲೂ ಹಾಳು ಮಾಡಿ ದ್ವೇಷ, ಮೌಢ್ಯದ ಕೂಪಕ್ಕಿಳಿಸಿಬಿಟ್ಟಿದ್ದಾರೆ ಎಂದಿದ್ದಾರೆ.
ಮತ್ತೆ ದೇಶವನ್ನು ಪ್ರಗತಿಯ ಹಾದಿಗೆ ತರಲು ದಶಕಗಳೇ ಬೇಕು. ಹಾಗಾಗಿ ಯಾರು ಅಧಿಕಾರಕ್ಕೆ ಬಂದರೂ ಚುನಾವಣೆಯ ನಂತರವೂ ನಾವು ಜಾಗೃತರಾಗಿದ್ದು ರಾಜಕಾರಣಿಗಳ ಕೊರಳಪಟ್ಟಿ ಹಿಡಿದು ಪ್ರಶ್ನಿಸುತ್ತಲೇ ಇದ್ದರಷ್ಟೇ ದೇಶವನ್ನು ಕಾಪಾಡಿಕೊಳ್ಳಲು ಸಾಧ್ಯ. ಇಲ್ಲದಿದ್ದರೆ ದೇಶದಲ್ಲಿ ಮಿಕ್ಕಿರುವುದನ್ನು ಲೂಟಿ ಮಾಡಿ ಮುಗಿಸಿ ಕೊನೆಗೆ ಧರ್ಮ ಜಾತಿಯ ಮಂಕು ಬೂದಿಯೆರಚಿ ಮತ್ತೆ ಓಟು ಕೇಳಲು ಮಾನ ಮರ್ಯಾದೆಯಿಲ್ಲದೇ ಬಂದು ನಿಲ್ಲುತ್ತಾರೆ. ಅಂಬೇಡ್ಕರರ ಮಾತು ನೆನಪಿರಲಿ ಸದಾ ತಿಳಿವುಳ್ಳವರಾಗಿರಿ ಸದಾ ಸಂಘಟಿತರಾಗಿರಿ ಸದಾ ಜಾಗೃತರಾಗಿರಿ ಎಂದಿದ್ದಾರೆ.
Poll (Public Option)

Post a comment
Log in to write reviews