
ಲಂಡನ್: ಅಪರಿಚಿತ ವ್ಯಕ್ತಿಗಳ ಗುಂಡೇಟಿನಿಂದ ಗಂಭೀರವಾಗಿ ಗಾಯಗೊಂಡ ಭಾರತೀಯ ಮೂಲದ ಬಾಲಕಿಯೊಬ್ಬಳು ಸಾವು ಬದುಕಿನ ನಡುವೆ ಹೋರಾಟ ನಡೆಸುತ್ತಿದ್ದಾಳೆ.
ಬುಧವಾರದಂದು ರಾತ್ರೋರಾತ್ರಿ ನಡೆದ ದುರ್ಘಟನೆಯಲ್ಲಿ 26, 37 ಮತ್ತು 42 ವರ್ಷದ ಮೂವರು ಪುರುಷರು ಕೂಡ ಗಾಯಗೊಂಡಿದ್ದಾರೆ. ಹೋಟೆಲ್‌ನಲ್ಲಿ ಕುಟುಂಬದ ಜೊತೆ ಊಟ ಮಾಡುತ್ತಿದ್ದ ಸಮಯದಲ್ಲಿ ಬೈಕ್‌ನಲ್ಲಿ ಬಂದ ದುಷ್ಕರ್ಮಿಗಳು ಗುಂಡು ಹಾರಿದಿಸದ್ದರು. ಈ ವೇಳೆ ಅಲ್ಲಿದ್ದ 9 ವರ್ಷದ ಬಾಲಕಿ ಹಾಗೂ ಇತರ ಮೂವರು ಗಾಯಗೊಂಡಿದ್ದಾರೆ. ಇದು ಗ್ಯಾಂಗ್‌ವಾರ್‌ಗೆ ಸಂಬಂಧಿತ ಘಟನೆ ಇರಬಹುದು ಎಂದು ಅನುಮಾನಿಸಲಾಗಿದೆ. ಬಾಲಕಿ ಕೇರಳದ ಕೊಚ್ಚಿಯ ಗೊತ್ತುರುತು ಪ್ರದೇಶದ ವಿನಯ-ಅಜೀಶ್ ದಂಪತಿಯ ಪುತ್ರಿ ಲಿಸೆಲ್ ಮಾರಿಯಾ ಎಂದು ಲಂಡನ್ ಮಲಯಾಳಿ ಸಮುದಾಯದವರು ಹೇಳಿದ್ದಾರೆ.
Poll (Public Option)

Post a comment
Log in to write reviews