
ಬೆಂಗಳೂರು: ಬಿರು ಬೇಸಿಗೆಗೆ ಕಂಗೆಟ್ಟಿದ್ದ ಜನತೆಗೆ ಮಳೆಯ ಆಗಮನ ಸಂತಸ ತಂದಿತ್ತು. ಆದರೆ ಕಳೆದ ಕೆಲ ದಿನಗಳಿಂದ ಮಳೆ ಇಲ್ಲದೆ ತರಕಾರಿ ಬೆಲೆ ಗಗನಕ್ಕೇರಿದೆ. ಈ ನಡುವೆ ಮಾರುಕಟ್ಟೆಯಲ್ಲಿ ದಿನದಿಂದ ದಿನಕ್ಕೆ ಟೊಮೆಟೊ ಸೇರಿದಂತೆ ಉಳಿದ ತರಕಾರಿಗಳು, ಹಸಿರು ಸೊಪ್ಪುಗಳ ದರಗಳು ಹೆಚ್ಚಳವಾಗುತ್ತಿದ್ದು, ಬೆಲೆ ಕೇಳಿಸಿಕೊಳ್ಳುವ ಗ್ರಾಹಕ ತಮ್ಮ ಹಣಕಾಸಿನ ಸ್ಥಿತಿಯನ್ನು ಎರಡೆರಡು ಬಾರಿ ಯೋಚನೆ ಮಾಡುವಂತಾಗಿದೆ.
ಸಾಮಾನ್ಯವಾಗಿ 40 ರಿಂದ 60 ರೂಪಾಯಿಗೆ ಸಿಗುತ್ತಿದ್ದ ತರಕಾರಿಗಳು 100 ರೂಪಾಯಿಗೆ ಏರಿದೆ. ಕಳೆದ ವಾರವಷ್ಟೆ ಕೆಜಿಗೆ 50 ರೂ.ಗೆ ದೊರೆಯುತ್ತಿದ್ದ ಟೊಮೆಟೊ, ಈಗ ಏಕಾಏಕಿ 100 ರೂ. ಗಡಿ ದಾಟಿದ್ದು, ಗ್ರಾಹಕರ ಜೇಬಿಗೆ ಕತ್ತರಿ ಬಿದಿದ್ದೆ. ಇನ್ನು ಇನ್ನೂ ಕ್ಯಾರೆಟ್ ಬೆಲೆ ಕೆಜಿಗೆ 110 ರೂ.ಇದ್ದರೆ, ಆಲೂಗಡ್ಡೆ ಬೆಲೆ 60 ರೂ. ಆಗಿದೆ. ಹೂಕೋಸು 60 ರೂ, ಬೆಂಡೆಕಾಯಿ 66 ರೂ, ಕ್ಯಾಪ್ಸಿಕಂ 80 ರೂ, ಬದನೆಕಾಯಿ 90 ರೂ.ಗಡಿ ದಾಟಿದ್ದರೆ. ಸೊಪ್ಪಿನ ದರ ಕೂಡ ಹೆಚ್ಚಾಗಿದ್ದು ಪಾಲಕ್ ಸೊಪ್ಪು 1 ಕೆಜಿಗೆ 115 ರೂ., ಕೊತ್ತಂಬರಿ ಸೊಪ್ಪಿನ ಬೆಲೆ 300 ರೂ. ಮೆಂತ್ಯ ಸೊಪ್ಪಿನ ಬೆಲೆ ಒಂದು ಕೆಜಿಗೆ 245 ರೂ. ಆಗಿದೆ. ಇದೇ ರೀತಿ ತರಕಾರಿ ಸೊಪ್ಪುಗಳು ಬೆಲೆ ಗನಕ್ಕೇರುತ್ತಿದ್ದರೆ ಹೋಟೆಲ್ ಗಳಲ್ಲಿ ಊಟ ತಿಂಡಿಗಳ ದರಗಳು ಕೂಡ ಏರಿಕೆ ಕಾಣಬಹುದು ಎಂದು ಹೇಳಲಾಗುತ್ತಿದೆ.
Poll (Public Option)

Post a comment
Log in to write reviews