ದೊಡ್ಮನೆಯಲ್ಲಿ ಮಂಜಣ್ಣ ಮಾಡಿದ ಕಾಮಿಡಿಗೆ ಚೀಪ್ ಮೆಂಟಾಲಿಟಿ ಎಂದ ನೆಟ್ಟಿಗರು!
ಕನ್ನಡದ ದೊಡ್ಡ ರಿಯಾಲಿಟಿ ಶೋ ಬಿಗ್ಬಾಸ್ ಕನ್ನಡ ಸೀಸನ್ 11 ಶುರುವಾಗಿದ್ದು, ದೊಡ್ಮನೆ (ಬಿಗ್ಬಾಸ್) ಇಂಟ್ರೆಸ್ಟಿಂಗ್ ಆಗಿದ್ದು ಪ್ರೇಕ್ಷಕರ ಮೆಚ್ಚುಗೆ ಗಳಿಸಿಕೊಂಡಿದೆ. ಡೇ ಒನ್ನಿಂದಲೂ ಶೋಗೆ ಪ್ರೇಕ್ಷಕರು ಲೈಕ್ಸ್, ವೀಕ್ಷಣೆ ಬರುತ್ತಿದೆ. ಪ್ರತಿಬಾರಿಯೂ ಬಿಗ್ಬಾಸ್ ಮನೆಯಲ್ಲಿ ತಮಾಷೆ ಮಾಡುವವರು ಒಬ್ಬರು ಇದ್ದೇ ಇರುತ್ತಾರೆ. ಹಾಗಾಗಿ ಬಿಗ್ಬಾಸ್ ಮನೆಯಲ್ಲಿ ಮಸ್ತ್ ಕಾಮಿಡಿ ಇರುತ್ತದೆ. ಆದರೆ ಪ್ರತಿಬಾರಿಯೂ ಆಡಿಕೊಂಡು ನಗುವುದೇ ಕಾಮಿಡಿ ಆಗ್ತಿದ್ಯಾ? ಎನ್ನುವುದು ಪ್ರೇಕ್ಷಕರ ಪ್ರಶ್ನೆಯಾಗಿದೆ.
ಕಾಮಿಡಿ ಮಾಡಿದ್ರೆ ಕಿಚ್ಚ ಕಿಚ್ಚು ಹಚ್ಚುತ್ತಾರಾ.?
ಹಿಂದಿನ ಸಾಕಷ್ಟು ಸೀಸನ್ಗಳಲ್ಲಿಯೂ ಕೂಡ ದೊಡ್ಮನೆಯಲ್ಲಿ ಸ್ಪರ್ದಿಗಳು ತಮಾಷೆ ಮಾಡುತ್ತಲೇ ಕೆಲವೊಮ್ಮೆ ಅದು ವಿಪರೀತವಾದಾಗ ಕೊನೆಗೆ ಕಿತ್ತಾಟಕ್ಕೆ ಬಂದು ನಿಲ್ಲುತ್ತದೆ. ತಮಾಷೆ ತಮಾಷೆಯಾಗಿದ್ದರೆ ಅದು ಲಯ ಕಳೆದುಕೊಳ್ಳುವುದಿಲ್ಲ. ಯಾವುದೋ ಒಂದು ತಮಾಷೆಯನ್ನೇ ಹಿಡಿದು ಒಬ್ಬರನ್ನೇ ಟಾರ್ಗೆಟ್ ಮಾಡಿ ಕಾಮಿಡಿ ಮುಂದುವರೆಸಿದರೆ ಅದು ಯಾರ ಮನಸ್ಸಿಗಾದರೂ ನೋವಾಗೋದು ಸಹಜ. ಹಿಂದಿನ ಸೀಸನ್ಗಳಲ್ಲಿ ಬೇಕು ಬೇಕಂತಲೇ ಎಲ್ಲರನ್ನು ನಗಿಸಲು ಒಬ್ಬರ ಕಾಲೆಳೆಯುವುದು ಇಂಥಹ ಘಟನೆ ನಡೆದಿತ್ತು. ಹೀಗಾಗಿ ಇಂಥದ್ದೆಲ್ಲ ನಡೆದಾಗ ಕಿಚ್ಚ ಅಂಥವರಿಗೆ ಕ್ಲಾಸ್ ತಳ್ಳೋದು ಪಕ್ಕಾ. ಹಾಗಾದರೆ ಈ ಬಾರಿಯೂ ಕ್ಲಾಸ್ ಇದೆಯಾ..? ಎಂದು ವಾರಾಂತ್ಯದಲ್ಲಿ ನೋಡಬೇಕಿದೆ.
ಮಂಜಣ್ಣನ ಮಾಡಿದ್ದು ಕಾಮಿಡಿನಾ?
ದೊಡ್ಮನೆಯಲ್ಲಿ ಮಂಜಣ್ಣ ಅವರು ಸಹಸ್ಪರ್ಧಿಗಳ ಅನುಪಸ್ಥಿತಿಯಲ್ಲಿಯೇ ಅವರನ್ನು ಭಾರೀ ಹಿಯಾಳಿಸಿ ಕಾಮಿಡಿ ಮಾಡಿದ್ದರು. ಅವರ ಕಾಮಿಡಿಗೆ ಸ್ಪರ್ಧಿಗಳೆಲ್ಲಾ ಎದುಬಿದ್ದು ಹೊಟ್ಟೆ ಹುಣ್ಣಾಗುವಂತೆ ನಕ್ಕಿದ್ದಾರೆ. ಮಂಜಣ್ಣ ಮಾಡಿದ್ದು ತಮಾಷೆ ಅಲ್ಲವೇ ಅಲ್ಲ ಅದು ಆಡಿಕೊಂಡು ನಕ್ಕಿರುವುದು ಎಂದು ನೆಟ್ಟಿಗರು ಗರಂ ಆಗಿದ್ದಾರೆ.
ಟ್ರೊಲ್ ಆದ ಮಂಜಣ್ಣ
ಮಂಜಣ್ಣನ ಕಾಮಿಡಿಗೆ ದೊಡ್ಮನೆಯವರು ನಕ್ಕಿರಬಹುದು. ಆದರೆ ಅವರು ಪ್ರೇಕ್ಷಕರ ಮೆಚ್ಚುಗೆಯನ್ನು ಖಂಡಿತವಾಗಿಯೂ ಗಳಿಸಿಲ್ಲ. ಅವರದ್ದೆಂಥಾ ಚೀಪ್ ಮೆಂಟಾಲಿಟಿ ಎಂದು ಮಂಜಣ್ಣ ಬಗ್ಗೆ ನೆಟ್ಟಿಗರು ಗರಂ ಆಗಿದ್ದಾರೆ. ಇವೆಲ್ಲಾ ಬೇಕಾ? ಕಾಮಿಡಿ ಕಿಂಗ್ ಆಗೋಕೆ ಬೇರೆಯವ್ರನ್ನು ಆಡ್ಕೊಳ್ಳೋ ಕೆಲಸ ಯಾಕೆ ಎಂದು ಟ್ರೋಲ್ ಮಾಡಲು ಶುರು ಮಾಡಿದ್ದಾರೆ.
ಅಷ್ಟಕ್ಕೂ ಆಗಿದ್ದೇನು?
ಮನೆಯ ಸ್ಪರ್ಧಿಗಳ ಹಾವ-ಭಾವಗಳನ್ನೆ ಗಮನಿಸಿ ಕಾಮಿಡಿ ಮಾಡಿದ್ದಾರೆ. ಆ ಲೆಕ್ಕದಲ್ಲಿ ಯಮುನಾ ಶ್ರೀನಿಧಿ ಹಾಗೂ ಲಾಯರ್ ಜಗದೀಶ್ ಅವರನ್ನ ಇಮಿಟೇಟ್ (Imitate) ಮಾಡಿಯೇ ಎಲ್ಲರನ್ನೂ ಹಾಸ್ಯದ ಹೊನಲಿನಲ್ಲಿಯೇ ತೇಲಿಸಿದ್ದಾರೆ. ಇದನ್ನ ಕಂಡ ಇತರ ಸದಸ್ಯರು ತುಂಬಾನೆ ಎಂಜಾಯ್ ಕೂಡ ಮಾಡಿದ್ದಾರೆ. ಆದರೆ ಈ ರೀತಿ ಮಾಡಿದ್ದು ಸರೀನಾ ಎಂದು ಡೊಡ್ಮನಿಯಿಂದ ಹೊರಗೆ ಆಕ್ರೋಶಕ್ಕೆ ಗುರಿಯಾಗಿದ್ದಾರೆ. ಹಾಗಾಗಿ ವೀಕೆಂಡ್ ಅಲ್ಲಿ ಮಂಜಣ್ಣನ ಕಾಮಿಡಿಗೆ ಕಿಚ್ಚ ಕ್ಲಾಸ್ ಮಾಡಲಿದ್ದಾರಾ ಎಂದು ಕಾದು ನೋಡಬೇಕಿದೆ.
Post a comment
Log in to write reviews