
ರಾಜ್ಯದಲ್ಲಿ ನಡೆದ ಲೊಕಸಭಾ ಚುಣಾವಣೆ ಹಿನ್ನಲೆ ಜೂನ್ ನಾಲ್ಕರಂದು ಮತ ಎಣಿಕೆ ನಡೆಯುತ್ತದೆ.ಈ ಸಂಬಂಧ ನಗರದಲ್ಲಿ 144 ಸೆಕ್ಷನ್ ಜಾರಿ ಮಾಡಲಾಗಿದೆ. ಮುಂದಿನ ತಿಂಗಳು.ನಾಲ್ಕರಿಂದ ಆರನೇ ತಾರಿಖಿನ ವರೆಗೂ ನಗರದಲ್ಲಿ 144 ಸೆಕ್ಷನ ಜಾರಿಯಲ್ಲಿ ಇರುತ್ತದೆ ಎಂದು ನಗರ ಆಯುಕ್ತ ದಯಾನಂದ ತಿಳಿಸಿದ್ದಾರೆ.ಸಮಾಜ ಘಾತುಕ ಶಕ್ತಿಗಳ ಕೆಲವು ಕಿಡಿಗೇಡಿಗಳು.ಕಾನೂನು ಸುವ್ಯವಸ್ಥೆ ಭಂಗ ಹಾಗೂ ಸಾರ್ವಜನಿಕ ಆಸ್ತಿ ಪಾಸ್ತಿ ನಷ್ಟವನ್ನುಂಟು ಮಾಡುವ ಸಾದ್ಯತೆ ಇರುವ ಬಗ್ಗೆ ಗುಪ್ತಚರ ಇಲಾಖೆಯಿಂದ ಮಾಹಿತಿ ಬಂದಿರುವ ಕಾರಣ ಈ ಕ್ರಮ ಕೈಗೊಂಡಿದ್ದಾರೆ.
ಈ ಹಿನ್ನಲೆ ನಗರದಲ್ಲಿ ಐದಕ್ಕು ಹೆಚ್ಚು ಮಂದಿ ಒಂದಡೆ ಸೇರುವಂತಿಲ್ಲಾ.ಮಾರಕಾಸ್ತ್ರಗಳನ್ನು ತೆಗೆದುಕೊಂಡು ಹೊಗುವಂತಿಲ್ಲಾ ಸ್ಪೊಟಕ ಶೇಖರಿಸುವುದು ಪ್ರಚೋದನಕಾರಿ ಭಾಷಣ ಮಾಡುವುದನ್ನು ಸಹ ನಗರದಲ್ಲಿ ನಿಷೇದಿಸಲಾಗಿದೆ.
Poll (Public Option)

Post a comment
Log in to write reviews