
ದುನಿಯಾ ವಿಜಯ್ ನಟಿಸಿ (Duniya Vijay), ನಿರ್ದೇಶನ ಮಾಡಿರುವ ‘ಭೀಮ’ ಸಿನಿಮಾ ರಾಜ್ಯಾದ್ಯಂತ ಅದ್ಧೂರಿಯಾಗಿ ರಿಲೀಸ್ ಆಗಿದೆ. ಸಲಗ ಸಿನಿಮಾದ ನಂತರ ಸಿನಿಪ್ರೇಕ್ಷಕರ ಮುಂದೆ ಮತ್ತೆ ಬಂದಿದ್ದಾರೆ ದುನಿಯಾ ವಿಜಯ್ ಸಹಜವಾಗಿಯೇ ಸಿನಿಮಾ ನಿರೀಕ್ಷೆ ಮೂಡಿಸಿತ್ತು. ಒಂದರ್ಥದಲ್ಲಿ ಈ ವರ್ಷ ಬಂದಿರುವ ಮೊದಲ ಸ್ಟಾರ್ ನಟನ ಸಿನಿಮಾ. ಹಾಗಾಗಿ ಶುಕ್ರವಾರ ಬೆಳಗಿನ ಶೋಗೂ ತಕ್ಕ ಮಟ್ಟಿಗೆ ಪ್ರೇಕ್ಷಕರು ಚಿತ್ರಮಂದಿರಗಳಿಗೆ ಬಂದಿದ್ದಾರೆ.
ಇದೀಗ ಸಿನಿಮಾ ಕುರಿತು ಪ್ರೇಕ್ಷಕರು ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ. ಸಿನಿ ರಸಿಕರೊಬ್ಬರು ʻʻಫಸ್ಟ್ ಹಾಫ್ ಸಾಂಗ್ಸ್, ಕಾಮಿಡಿ ಸೂಪರ್. ಸೆಕೆಂಡ್ ಹಾಫ್ ಸೆಂಟಿಮೆಂಟಲ್ ಹಾಗೂ ರಿವೇಂಜ್ ಸ್ಟೋರಿ. ಮತ್ತೊಂದು ಯಶಸ್ವಿ ಸಿನಿಮಾ ಕೊಟ್ಟ ದುನಿಯಾ ವಿಜಯ್ ಅವರಿಗೆ ಹ್ಯಾಟ್ಸಾಫ್ʼʼಎಂದು ಬರೆದುಕೊಂಡಿದ್ದಾರೆ.
ʻಭೀಮ ಪ್ಯೂರ್ ರಾ ಮೂವಿ. ಪ್ಯೂರ್ ಮಾಸ್ ಎಂಟರ್‌ಟ್ರೈನರ್. ಫಸ್ಟ್ ಹಾಫ್ ಹಾಗೂ ಕ್ಲೈಮ್ಯಾಕ್ಸ್ ಬೆಂಕಿ. ಆಲ್ ದಿ ಬೆಸ್ಟ್ ಭೀಮʼʼ ಎಂದು ಇನ್ನೊಬ್ಬರು ಟ್ವೀಟ್ ಮಾಡಿದ್ದಾರೆ.
ʻʻಈಗಷ್ಟೇ ಭೀಮ ಸಿನಿಮಾ ನೋಡಿದೆ. ಬಲವಾದ ನಿರೂಪಣೆ ಮತ್ತು ಕಲಾವಿದರ ನಟನೆ ಗಮನ ಸೆಳೆಯುತ್ತದೆ. ಆದರೆ ಲೋಕಲ್ ದೃಶ್ಯಗಳು ಮತ್ತು ಪುನರಾವರ್ತನೆ ಆಗುವ ಆಕ್ಷನ್ ಚಿತ್ರಕ್ಕೆ ಹಿನ್ನಡೆ ಆಗುತ್ತದೆ. ಸೆಕೆಂಡ್ ಹಾಫ್ ಕೊಂಚ ನಿರಾಸೆ ಮೂಡಿಸುತ್ತದೆ. ಆದರೂ ಸಿನಿಮಾ ನೋಡಿಸಿಕೊಳ್ಳುತ್ತದೆ. ಆ ಕೊನೆ ಟ್ವಿಸ್ಟ್? ಸೂಪರ್. 3.5/5 ನನ್ನ ರೇಟಿಂಗ್ʼʼ ಎಂದು ಬರೆದುಕೊಂಡಿದ್ದಾರೆ.
ಭೀಮ’ ದುನಿಯಾ ವಿಜಯ್ ನಿರ್ದೇಶಿಸಿರುವ ಎರಡನೇ ಸಿನಿಮಾ ಆಗಿದೆ. ‘ಸಲಗ’ ಸಿನಿಮಾ ಮೂಲಕ ಗೆಲುವು ಕಂಡಿರುವ ದುನಿಯಾ ವಿಜಯ್ ಈ ಬಾರಿ ಮತ್ತೊಂದು ಗೆಲುವಿನ ಭರವಸೆಯಲ್ಲಿದ್ದಾರೆ. ಈ ಸಿನಿಮಾ ನೋಡಲು ಕನಿಷ್ಠ 18 ವರ್ಷ ಆಗಿರಬೇಕಾಗಿರುವುದು ಕಡ್ಡಾಯ. ಅದಕ್ಕಿಂತ ಕಡಿಮೆ ವಯಸ್ಸಿನ ದುನಿಯಾ ವಿಜಯ್ ಅಭಿಮಾನಿಗಳು ಈ ಚಿತ್ರವನ್ನು ನೋಡಲು ಸಾಧ್ಯವಿಲ್ಲ. ಯಾಕೆಂದರೆ ಈ ಸಿನಿಮಾಕ್ಕೆ ದೊರಕಿರುವುದು “ಎ” ಸರ್ಟಿಫಿಕೇಟ್.
ಸಿನಿಮಾದ ಬಗ್ಗೆ ಹೇಳುವುದಾದರೆ ದುನಿಯಾ ವಿಜಯ್ ನಾಯಕನಾಗಿ ನಟಿಸಿದ್ದರೆ, ನಾಯಕಿಯಾಗಿ ರಂಗಭೂಮಿ ಕಲಾವಿದೆ ಅಶ್ವಿನಿ ಕಾಣಿಸಿಕೊಂಡಿದ್ದಾರೆ. ಕೃಷ್ಣ ಸಾರ್ಥಕ್ ಈ ಸಿನಿಮಾಗೆ ಬಂಡವಾಳ ಹೂಡಿಸಿದ್ದಾರೆ. ಸಲಗ ಬಳಿಕ ದುನಿಯ ವಿಜಯ್ ಆ್ಯಕ್ಷನ್ ಕಟ್ ಹೇಳುತ್ತಿರುವ 2ನೇ ಸಿನಿಮಾ ಇದಾಗಿದೆ. ಸಲಗ ಸಕ್ಸೆಸ್‌ನಲ್ಲಿರುವ ವಿಜಿ “ಭೀಮʼ ಮೂಲಕ ಮತ್ತೊಂದು ಗೆಲುವಿನ ನಿರೀಕ್ಷೆಯಲ್ಲಿದ್ದಾರೆ.
Poll (Public Option)

Post a comment
Log in to write reviews