2024-12-24 06:21:19

News broadcasting is the medium of broadcasting various news events and other information via television, radio, or the internet in the field of broadcast journalism.

Get In Touch

  • info@samayanews.tv
  • 8050000444
  • Samaya News, 48, 2nd Floor, 2nd Main, 2nd Cross, Ganganagar, Muthappa Block, RT Nagar, Bengaluru, Karnataka 560032

ಭಯೋತ್ಪಾದಕರ ಬೆದರಿಕೆ: ಮುಂಬೈನಲ್ಲಿ ಹೈಅಲರ್ಟ್​

ಮುಂಬೈ: ಮುಂಬೈಗೆ ಭಯೋತ್ಪಾದಕರ ಬೆದರಿಕೆ ಇದೆ ಎಂದು ಕೇಂದ್ರ ಗುಪ್ತಚರ ಸಂಸ್ಥೆಗಳಿಂದ ಮಾಹಿತಿ ತಿಳಿದು ಬಂದಿದ್ದು, ಮಹಾರಾಷ್ಟ್ರ ಪೊಲೀಸರು ಎಚ್ಚೆತ್ತುಕೊಂಡಿದ್ದು, ಪ್ರಾರ್ಥನಾ ಮಂದಿರಗಳು ಮತ್ತು ಇತರ ಜನನಿಬಿಡ ಪ್ರದೇಶಗಳಲ್ಲಿ ತೀವ್ರ ಶೋಧ ನಡೆಸಿ ಪೊಲೀಸ್‌ ಅಧಿಕಾರಿಗಳಿಂದಲೂ ಮಾಕ್‌ ಡ್ರಿಲ್‌ ನಡೆಸಿ ಮುಂಬೈನಾದ್ಯಂತ ಬಿಗಿ ಭದ್ರತೆಯನ್ನು ಮಾಡಲಾಗುತ್ತದೆ.

ಭದ್ರತಾ ವ್ಯವಸ್ಥೆಗಳ ಬಗ್ಗೆ ತಮ್ಮ ವಲಯಗಳಲ್ಲಿ ವಿವಿಧ ನಗರಗಳ ಪೊಲೀಸ್ ಉಪ ಆಯುಕ್ತರು ವಿಶೇಷ ಗಮನ ಹರಿಸುವಂತೆ ಉನ್ನತ ಅಧಿಕಾರಿಗಳು ಸೂಚನೆ ನೀಡಿದ್ದಾರೆ. ಯಾವುದೇ ಅನುಮಾನಾಸ್ಪದ ಚಟುವಟಿಕೆಗಳ ಬಗ್ಗೆ ಮಾಹಿತಿ ಇದ್ದಲ್ಲಿ ಮಾಹಿತಿ ನೀಡಬೇಕು ಎಂದು ಪೊಲೀಸರು ತಿಳಿಸಿದ್ದಾರೆ.

ಎರಡು ಪ್ರಸಿದ್ಧ ಧಾರ್ಮಿಕ ಸ್ಥಳಗಳಲ್ಲಿ ಕ್ರಾಫರ್ಡ್ ಮಾರ್ಕೆಟ್ ಪ್ರದೇಶದಲ್ಲಿ ಪೊಲೀಸರು ಅಣಕು ಡ್ರಿಲ್ ನಡೆಸುತ್ತಿದ್ದಾರೆ. ದುರ್ಗಾ ಪೂಜೆ ಮತ್ತು ದೀಪಾವಳಿ ಹಬ್ಬಗಳನ್ನು ಪ್ರತಿ ವರ್ಷ ಮುಂಬೈನಲ್ಲಿ ಆಚರಿಸಲಾಗುತ್ತಿದ್ದು, ಈ ಸಮಯದಲ್ಲಿ, ಭಯೋತ್ಪಾದಕ ಬೆದರಿಕೆಗಳ ಎಚ್ಚರಿಕೆ ಇರುವುದರಿಂದ ಜನರು ಎಚ್ಚರದಿಂದ ಇರಬೇಕೆಂದು ಅಧಿಕಾರಿಗಳು ತಿಳಿಸಿದ್ದಾರೆ. ಇದಲ್ಲದೆ, 288 ಸದಸ್ಯ ಬಲದ ಮಹಾರಾಷ್ಟ್ರ ರಾಜ್ಯ ವಿಧಾನಸಭೆಗೆ ನವೆಂಬರ್‌ನಲ್ಲಿ ಚುನಾವಣೆ ನಡೆಯುವ ಸಾಧ್ಯತೆಯಿದೆ ಎಂದು ಸಂಬಂಧಿತ ಮೂಲಗಳು ಹೇಳುತ್ತವೆ.

Post a comment

No Reviews