ಜಮ್ಮು ಮತ್ತು ಕಾಶ್ಮೀರದ ಪೂಂಚ್ ಜಿಲ್ಲೆಯ ಸೂರನ್ ಕೋಟೆ ಪ್ರದೇಶದಲ್ಲಿ ವಾಯುಪಡೆ ವಾಹನ ಮೇಲೆ ಉಗ್ರರು ದಾಳಿ ನಡೆಸಿದ್ದಾರೆ.
ಭಯೋತ್ಪಾದಕರ ಗುಂಡಿನ ದಾಳಿಗೆ ಭಾರತೀಯ ವಾಯುಪಡೆಯ 6 ಸಿಬ್ಬಂದಿಗಳು ಗಾಯಗೊಂಡಿದ್ದಾರೆ ಎಂದು ಮೂಲಗಳು ತಿಳಿಸಿವೆ.
ಕಳೆದ ವರ್ಷ ಈ ಪ್ರದೇಶ, ಸೇನೆಯ ಮೇಲೆ ಸರಣಿ ಭಯೋತ್ಪಾದಕ ದಾಳಿಗೆ ಸಾಕ್ಷಿಯಾಗಿತ್ತು.
ಆದರೆ ಈ ವರ್ಷ ಸಶಸ್ತ್ರ ಪಡೆಗಳ ಮೇಲೆ ನಡೆದ ಮೊದಲ ದಾಳಿ ಇದಾಗಿದೆ.
ದಾಳಿ ನಂತರ ಹೆಚ್ಚುವರಿ ಭದ್ರತಾ ಪಡೆಗಳನ್ನು ಸ್ಥಳಕ್ಕೆ ಕಳುಹಿಸಲಾಗಿದೆ.
ಗಾಯಗೊಂಡ ಯೋಧರನ್ನು ಚಿಕಿತ್ಸೆಗಾಗಿ ಆಸ್ಪತ್ರೆಗೆ ದಾಖಲಿಸಲಾಗಿದೆ.
ಗಂಭೀರ ಗಾಯವಾಗಿದ್ದ ಇಬ್ಬರು ಸೈನಿಕರಲ್ಲಿ ಓರ್ವ ಸೈನಿಕ ಹುತಾತ್ಮರಾಗಿದ್ದಾರೆ ಎಂಬ ಮಾಹಿತಿ ಲಭ್ಯವಾಗಿದೆ.
Tags:
- indian air force
- air force convoy attacked in poonch
- poonch terrorist attack
- poonch terror attack
- terrorist attack in poonch
- terrorist attack
- air force
- poonch attack
- air force convoy attacked
- terror attack in poonch
- attack on army
- poonch attack terrorists
- poonch attack video
- terrorist attack on air force convoy
- militant attack on army convoy in jammu kashmir
- terrorist attack on air force vehicle in poonch
- terrorist attack on an air force convoy in poonch
Post a comment
Log in to write reviews