
ಉಡುಪಿ: ನಡೆದುಕೊಂಡು ಹೋಗುತ್ತಿರುವ ವಿದ್ಯಾರ್ಥಿ ಮೇಲೆ ಟಿಪ್ಪರ್ ಚಕ್ರ ಹರಿದಿರುವ ಭಯಾನಕ ಘಟನೆ ಕೋಟೇಶ್ವರ ಹಾಲಾಡಿ ರೋಡ್‌ನ ಕಾಗೇರಿ ಕ್ರಾಸ್ ಬಳಿ ನಡೆದಿದೆ ಎನ್ನಲಾಗಿದೆ. ತಮ್ಮ ಪಾಡಿಗೆ ತಾವು ನಡೆದು ಹೋಗುತ್ತಿದ್ದ ವಿದ್ಯಾರ್ಥಿಗೆ ಟಿಪ್ಪರ್ ಲಾರಿ ಗುದ್ದಿದ್ದು, ಧನುಷ್ ಎಂಬ ವಿದ್ಯಾರ್ಥಿ ಚಕ್ರದಡಿ ಸಿಲುಕಿ ಸ್ಥಳದಲ್ಲೇ ಸಾವನ್ನಪ್ಪಿದ್ದಾನೆ. ಕಾಗೇರಿ ಕ್ರಾಸ್ ಬಳಿ ಟಿಪ್ಪರ್ ಅಡ್ಡಲಾಗಿ ಬಂದ ಕಾರು ತಪ್ಪಿಸಲು ಹೋಗಿದ್ದಾನೆ. ಮೃತ ಧನುಷ್ ಪಕ್ಕದಲ್ಲೇ ಉಳಿದ ಇಬ್ಬರು ವಿದ್ಯಾರ್ಥಿಗಳು ಮಾಡಿ ಬಚಾವ್ ಆಗಿದ್ದಾರೆ.
ಈ ಭೀಕರ ಅಪಘಾತದ ದೃಶ್ಯ ಅದೇ ದಾರಿಯಲ್ಲಿ ಸಂಚರಿಸುತ್ತಿದ್ದ ಕಾರಿನ ಕ್ಯಾಮೆರಾದಲ್ಲಿ ಸೆರೆಯಾಗಿದೆ. ಮೃತ ವಿದ್ಯಾರ್ಥಿ ಕೋಟೇಶ್ವರ ಸರ್ಕಾರಿ ಕಾಲೇಜಿನಲ್ಲಿ ಪ್ರಥಮ ವರ್ಷ ಡಿಗ್ರಿ ಓದುತ್ತಿದ್ದ. ಈ ಅಪಘಾತ ನಡೆಯುತ್ತಿದ್ದಂತೆ ಲಾರಿ ಚಾಲಕ ಸ್ಥಳದಿಂದ ಪರಾರಿಯಾಗಿದ್ದಾನೆ.
Poll (Public Option)

Post a comment
Log in to write reviews