
ಸ್ಯಾಂಡಲ್‌ವುಡ್ ಗೆ ಮತ್ತೊಂದು ಹೊಸ ತಂಡದ ಆಗಮನವಾಗಿದೆ. “ಮಾರಿಗೆ ದಾರಿ” ಶೀರ್ಷಿಕೆಯ ಈ ಸಿನಿಮಾ ಸದ್ದಿಲ್ಲದೆ ಚಿತ್ರೀಕರಣ ಮುಗಿಸಿ, ಫಸ್ಟ್ ಲುಕ್ ಟೀಸರ್ ಬಿಡುಗಡೆಗೊಳಿಸಿದೆ. ಹೊಸತೇನನ್ನೋ ಹೇಳಲು ಹೊರಟಿರುವಂತೆ ಭಾಸವಾಗುವ ಈ ಟೀಸರ್ ನಲ್ಲಿ ಕಥೆಯ ಸುಳಿವು ಬಿಟ್ಟು ಕೊಡದೆ, ಹೀರೋ ಕ್ಯಾರೆಕ್ಟರ್‌ಗಳನ್ನು ಪ್ರೇಕ್ಷಕರ ಮುಂದಿಡಲಾಗಿದೆ.
ಫಸ್ಟ್ ಲುಕ್ ಟೀಸರ್ ಮೂಲಕ ಮಾರಿಗೆ ದಾರಿ ಪಕ್ಕಾ ಮಾಸ್ ಕಂಟೆಂಟ್ ಹೊಂದಿರುವ ಚಿತ್ರವೆಂಬುದನ್ನು ಸಾರಿ ಹೇಳುವಂತಿದೆ. ಕಥೆ, ಚಿತ್ರಕಥೆ, ಸಂಭಾಷಣೆಯೊಂದಿಗೆ ಈ ಚಿತ್ರವನ್ನು ಅಗಸ್ತ್ಯ ನಿರ್ದೇಶನ ಮಾಡಿದ್ದಾರೆ. ವಿಶೇಷವೇನೆಂದರೆ, ಅವರೇ ನಾಯಕನಾಗಿಯೂ ನಟಿಸಿದ್ದಾರೆ. ಅವರ ಒಂದಷ್ಟು ದೃಶ್ಯಗಳು ಟೀಸರ್ ಮೂಲಕ ಕಾಣಿಸಿಕೂಂಡಿದೆ.
ನೆಲಮೂಲದ ಕಥೆ, ಮಾಸ್ ದೃಷ್ಯಾವಳಿಗಳ ಸುಳಿವಿನೊಂದಿಗೆ ಮೂಡಿ ಬಂದಿರೋ ಈ ಟೀಸರ್ ಒಂದಷ್ಟು ಪ್ರೇಕ್ಷಕರನ್ನು ತನ್ನತ್ತ ಸೆಳೆದುಕೊಳ್ಳುತ್ತಿದೆ. ರಾಧಾ ಫಿಲಂಸ್ ಬ್ಯಾನರಿನಡಿಯಲ್ಲಿ ಈ ಚಿತ್ರ ನಿರ್ಮಾಣಗೊಂಡಿದ್ದು ಕನ್ನಡದ ಪ್ರೇಕ್ಷಕರಿಗೆ ತೀರಾ ಫ್ರೆಶ್ ಅನ್ನಿಸುವ ಕಥೆಯೊಂದಿಗೆ ಈ ಸಿನಿಮಾವನ್ನು ರೂಪಿಸಿರೋದಾಗಿ ನಿರ್ದೇಶಕರು ತಿಳಿಸಿದ್ದಾರೆ. ಇನ್ನುಳಿದಂತೆ, ಅಗಸ್ತ್ಯ, ಮಹಾಲಕ್ಷ್ಮಿ, ಕಾಕ್ರೋಚ್ ಸುಧಿ, ವರ್ಧನ್, ಪ್ರದೀಪ್ ಪೂಜಾರಿ, ಬೆನಕ ನಂಜಪ್ಪ, ಬಾಲ ರಾಜವಾಡಿ ಮುಂತಾದವರ ತಾರಾಗಣದೊಂದಿಗೆ ಮಾರಿಗೆ ದಾರಿ ಕಳೆಗಟ್ಟಿಕೊಂಡಿದೆ. ಜಗದೀಶ್ ಗೌಡ ಛಾಯಾಗ್ರಹಣ, ಸ್ವಾಮಿನಾಥನ್ ಆರ್.ಕೆ ಸಂಗೀತ ನಿರ್ದೇಶನ ಮಾಡಿದ್ದಾರೆ.
Poll (Public Option)

Post a comment
Log in to write reviews