2024-12-24 01:03:23

News broadcasting is the medium of broadcasting various news events and other information via television, radio, or the internet in the field of broadcast journalism.

Get In Touch

  • info@samayanews.tv
  • 8050000444
  • Samaya News, 48, 2nd Floor, 2nd Main, 2nd Cross, Ganganagar, Muthappa Block, RT Nagar, Bengaluru, Karnataka 560032

ಬಾಂಗ್ಲಾನ ಬೆಂಡೆತ್ತಿ ಐತಿಹಾಸಿಕ ಗೆಲುವು ಸಾಧಿಸಿದ ಟೀಂ ಇಂಡಿಯಾ: ಸತತ 18 ಸರಣಿ ಗೆದ್ದು ಟೆಸ್ಟ್‌ಗೆ ಬಾಸ್‌.!

ನವದೆಹಲಿ: ಕಾನ್ಪುರದಲ್ಲಿ ನಡೆದ ಬಾಂಗ್ಲಾದೇಶ ವಿರುದ್ದದ ಟೆಸ್ಟ್ ಸರಣಿಯಲ್ಲಿ ಟೀಂ ಇಂಡಿಯಾ ಐತಿಹಾಸಿಕ ಗೆಲುವು ಸಾಧಿಸಿದೆ. ಮಳೆ ಬಾಧಿತ ನಡುವೆಯೂ ಕಾನ್ಪುರ ಟೆಸ್ಟ್‌ನಲ್ಲಿ ಭಾರತ ಅಮೋಘ ಪ್ರದರ್ಶನ ನೀಡುವ ಮೂಲಕ 7 ವಿಕೆಟ್‌ಗಳಿಂದ ಅಭೂತಪರ್ವ ಜಯ ಸಾಧಿಸಿದೆ. ಈ ಗೆಲುವಿನೊಂದಿಗೆ ಭಾರತ 2-0 ಅಂತರದಲ್ಲಿ ಸರಣಿ ಗೆದ್ದು ಟೆಸ್ಟ್​ ಕ್ರಿಕೆಟ್​ ತಾನೇ ನಂಬರ್ 1 ಎಂಬುದನ್ನ ಕ್ರಿಕೆಟ್​ ಜಗತ್ತಿಗೆ ತೋರಿಸಿಕೊಟ್ಟಿದೆ.

ಕೇವಲ 2 ದಿನಗಳಲ್ಲಿ ಪಾವಡವನ್ನೇ ಮಾಡಿರುವ ಟೀಮ್ ಇಂಡಿಯಾ ಎರಡನೇ ಇನ್ನಿಂಗ್ಸ್​ನಲ್ಲಿ 146 ರನ್​ಗಳಿಗೆ ಬಾಂಗ್ಲಾ ಕ್ರಿಕೆಟಿಗರನ್ನು ಆಲ್‌ ಔಟ್‌ ಮಾಡಿದೆ. ಬಳಿಕ 95 ರನ್​ಗಳ ಸಾಧಾರಣ ಗುರಿಯನ್ನು ಬೆನ್ನಟ್ಟಿದ ಟೀಂ ಇಂಡಿಯಾ 3 ವಿಕೆಟ್​ ಕಳೆದುಕೊಂಡು ಗುರಿ ತಲುಪುವ ಮೂಲಕ ಗೆಲುವಿನ ನಗೆ ಬೀರಿತು. ಭಾರತದ ಪರ ಎರಡನೇ ಇನ್ನಿಂಗ್ಸ್​ನಲ್ಲಿ ಯಶಸ್ವಿ ಜೈಸ್ವಾಲ್​ (51) ಅರ್ಧಶತಕ ಸಿಡಿಸಿ ತಂಡದ ಗೆಲುವಿನಲ್ಲಿ ಪ್ರಮುಖ ಪಾತ್ರವಹಿಸಿದರು.

18ನೇ ಸರಣಿ ಗೆದ್ದ ಭಾರತ: ಬಾಂಗ್ಲಾ ವಿರುದ್ಧ ಸರಣಿ ಗೆಲ್ಲುತ್ತಿದ್ದಂತೆ ಭಾರತ ತವರಿನಲ್ಲಿ ಗೆಲುವಿನ ಓಟ ಮುಂದುವರೆಸಿದೆ. ಇದು ತವರಿನಲ್ಲಿ ಭಾರತಕ್ಕೆ ಸತತ 18ನೇ ಸರಣಿ ಗೆಲುವಾಗಿದೆ. 2012-13ರಿಂದ ತವರಿನಲ್ಲಿ ನಡೆದ ಟೆಸ್ಟ್ ಸರಣಿಯಲ್ಲಿ ಭಾರತ ಒಂದೇ ಒಂದು ಸೋಲನ್ನು ಕಂಡಿಲ್ಲ.

ಟೀಂ ಇಂಡಿಯಾದ ಮೊದಲ ಇನಿಂಗ್ಸ್: 285/9; ಎರಡನೇ ಇನಿಂಗ್ಸ್ 98/3

ಬಾಂಗ್ಲಾದ ಮೊದಲ ಇನಿಂಗ್ಸ್: 233/10; ಎರಡನೇ ಇನಿಂಗ್ಸ್ 146/10

Post a comment

No Reviews