
ಟೀಮ್ ಇಂಡಿಯಾದ ಆಂಭಿಕ ಆಟಗಾರ ರನ್‌ಗಳ ಸುರಿ ಮಳೆ ಹರಿಸಿದ್ದ ಎಡಗೈ ಬ್ಯಾಟರ್ ಶಿಖರ್ ಧವನ್ ಅವರು ಅಂತಾರಾಷ್ಟ್ರೀಯ ಕ್ರಿಕೆಟ್ಗೆ ನಿವೃತ್ತಿ ಘೋ಼ಷಿಸಿದ್ದಾರೆ.
ಗಬ್ಬರ್ ಸಿಂಗ್ ಎಂದೇ ಫೇಮಸ್ ಆಗಿರುವ ಧವನ್, ಹಲವು ಅಂತಾರಾಷ್ಟ್ರೀಯ ಕ್ರಿಕೆಟ್ ನಲ್ಲಿ ಹಲವು ದಾಖಲೆಗಳನ್ನು ಬರೆದಿದ್ದಾರೆ, ಸೋಷಿಯಲ್ ಮೀಡಿಯಾ ಎಕ್ಸ್ ನಲ್ಲಿ ವಿಡಿಯೋವನ್ನು ಹಂಚಿಕೊಂಡಿರುವ ಧವನ್, ನನ್ನ ಕ್ರಿಕೆಟ್ ಪಯಣದ ಈ ಅಧ್ಯಾಯವನ್ನು ನಾನು ಮುಕ್ತಾಯಗೊಳಿಸುತ್ತಿದ್ದೇನೆ, ನಾನು ಅಸಂಖ್ಯಾತ ನೆನೆಪುಗಳು ಮತ್ತು ಕೃತಜ್ಞತೆಯನ್ನು ನನ್ನೂಂದಿದಗೆ ಒಯ್ಯುತ್ತಿದ್ದೇನೆ. ನಿಮ್ಮ ಪ್ರೀತಿ ಮತ್ತು ಬೆಂಬಲಕ್ಕಾಗಿ ಧನ್ಯವಾದಗಳು ಜೈ ಹಿಂದ್ ಎಂದು ಬರೆದುಕೊಂಡಿದ್ದಾರೆ.
ತಮ್ಮ ಸೋಷಿಯಲ್ ಮೀಡಿಯಾ ಹ್ಯಾಂಡಲ್‌ಗಳಲ್ಲಿ ಪೋಸ್ಟ್ ಮಾಡಿದ ವೀಡಿಯೊದಲ್ಲಿ ಸಂಪೂರ್ಣ ಕಥೆಯನ್ನು ಓದಲು ನೀವು ಪುಟವನ್ನು ತಿರುಗಿಸಬೇಕು ಎಂಬ ಮಾತಿದೆ. ಅದನ್ನೇ ನಾನು ಮಾಡಲಿದ್ದೇನೆ ಅಂತಾರಾಷ್ಟ್ರೀಯ ಮತ್ತು ದೇಶೀಯ ಕ್ರಿಕೆಟ್‌ಗೆ ನಿವೃತ್ತಿ ಘೋಷಿಸುತ್ತಿದ್ದೇನೆ ನಾನು ನನ್ನ ವೃತ್ತಿ ಜೀವನದ ಉತ್ತಮ ಸಮಯದಲ್ಲಿ ದೇಶಕ್ಕಾಗಿ ತುಂಬಾ ಅಡಿರುವ ಕಾರಣ ಶಾಂತಿಯಿಂದ ನಿವೃತ್ತಿ ಘೋಷಿಸುತ್ತಿದ್ದೇನೆʼ ಎಂದು ಹೇಳಿದ್ದಾರೆ.
Poll (Public Option)

Post a comment
Log in to write reviews