ದಾವಣಗೆರೆ: ಆನ್ಲೈನ್‌ನಲ್ಲಿ ಹಣ ಹೂಡಿಕೆ ಮಾಡಿದರೆ ಹೆಚ್ಚಿನ ಹಣ ಗಳಿಸಬಹುದೆಂದು ವಂಚಕರು ಆಸೆ ತೋರಿಸಿದ್ದಕ್ಕೆ ಮರುಳಾದ ಖಾಸಗಿ ಶಿಕ್ಷಕರೊಬ್ಬರು ಬರೋಬ್ಬರಿ 91.90 ಲಕ್ಷ ರೂ. ಕಳೆದುಕೊಂಡಿರುವ ಪ್ರಕರಣ ದಾವಣಗೆರೆಯಲ್ಲಿ ಬೆಳಕಿಗೆ ಬಂದಿದೆ.
ಶಿಕ್ಷಕ ವಾಟ್ಸಾಪ್ ನೋಡುವಾಗ NGC (ನ್ಯೂಮೌಂಟ್ ಗೋಲ್ಡ್ ಕ್ಯಾಪಿಟಲ್) ವೆಬ್ ಸೈಟ್ ಲಿಂಕ್ ಬಂದಿದ್ದು, ಅದನ್ನು ಕ್ಲಿಕ್ ಮಾಡಿದಾಗ ಇದು ಅಮೆರಿಕಾ ಟ್ರೇಡಿಂಗ್ ಮತ್ತು ಮೈನಿಂಗ್ ಕಂಪನಿ ಎಂದು ತಿಳಿಸಿ ಶಿಕ್ಷಕನಿಂದ ದಾಖಲೆಗಳನ್ನು ಪಡೆದು ರಿಜಿಸ್ಟರ್ ಮಾಡಿಸಿಕೊಂಡಿದೆ. ನಂತರ ಖಾತೆ ತೆರೆದು, ಲಾಭಾಂಶದ ಆಸೆ ತೋರಿಸಿ ಹಂತ ಹಂತವಾಗಿ ಹಣ ಹಾಕಿಸಿಕೊಂಡಿದೆ.
ಶಿಕ್ಷಕ ಹಣ ಹಾಕಿದ ನಂತರ ಖಾತೆಯಿಂದ 27.40 ಲಕ್ಷ ರೂ. ಹಣವನ್ನು ಬಿಡಿಸಿಕೊಳ್ಳಲು ಹೋದಾಗ ನಿಮ್ಮ ಖಾತೆ ಲಾಕ್ ಆಗಿದ್ದು, 27.40 ಲಕ್ಷ ರೂ. ಎಕ್ಸ್ಚೇಂಜ್ ಫ್ರೀ ಹೇಳಿದ್ದರಿಂದ ಶಿಕ್ಷಕನಿಗೆ ಹಣವನ್ನು ತುಂಬುವಂತೆ ಖಾತೆಯಿಂದ ಹಣವನ್ನು ವರ್ಗಾವಣೆ ಮಾಡಿದ್ದಾರೆ. ನಂತರ ನಿಮ್ಮ ಅಕೌಂಟ್‌ನಲ್ಲಿ ಲಾಭಾಂಶ ಸೇರಿ ಒಟ್ಟು 2 ಕೋಟಿ ರೂ. ಹಣ ಇದ್ದು, ವಿತ್ ಡ್ರಾ ಮಾಡಬೇಕೆಂದರೆ ಮತ್ತೆ 47.29 ಲಕ್ಷ ರೂ. ಹಣವನ್ನು ಪಾವತಿಸಬೇಕು ಎಂದು ಮೆಸೇಜ್ ಕಳುಹಿಸಿದರು. ಆಗಲೂ ಕೂಡ ಶಿಕ್ಷಕ 2 ಕೋಟಿ ರೂ ಹಣ ಬರುತ್ತದೆ ಎಂದು ನಂಬಿದ್ದಾರೆ. ಹಣ ಬಾರದೇ ಇರುವುದರಿಂದ ಮೋಸ ಹೋಗಿರುವುದು ಗೊತ್ತಾಗಿದೆ. ನಂತರ ಯಾವುದೇ ರೀತಿಯಲ್ಲಿ ಕಮಿಷನ್ ಹಣವನ್ನೂ ಸಹ ನೀಡಿದೆ ವಂಚನೆ ಮಾಡಿದ್ದಾರೆ ಎಂದು ಆನ್ಲೈನ್ ವಂಚನೆಗೆ ಒಳಗಾಗಿರುವ ನಗರದ ನಿಟ್ಟುವಳ್ಳಿ ವಾಸಿ ಖಾಸಗಿ ಶಾಲೆಯ ಶಿಕ್ಷಕ, ಸಿಇಎನ್ ಅಪರಾಧ ಠಾಣೆಯಲ್ಲಿ ದೂರು ನೀಡಿದ್ದಾರೆ.
Post a comment
Log in to write reviews