
ಲೋಕಸಭಾ ಚುನಾವಣೆ ಹಿನ್ನಲೆ ಪೋಲಿಂಗ್ ಆಫಿಸರ್ ಆಗಿ ನಿಯೋಜಿತಗೊಂಡ ಸಹಾಯಕ ಶಿಕ್ಷಕ ಮತಗಟ್ಟೆಒಳಗೆ ಸೆಲ್ಫಿಯನ್ನು ತೆಗೆದುಕೊಂಡಿದ್ದಾರೆ. ಈ ಹಿನ್ನಲೆ ಚುನಾವಣಾಧಿಕಾರಿಗಳು ಶಿಕ್ಷಕನನ್ನು ಅಮಾನತುಗೊಳಿಸಿದ್ದಾರೆ. ಈ ಘಟನೆ ಲಕ್ನೋದ ಹಮೀರ್ ಪುರ್ ನಲ್ಲಿ ನಡೆದಿದೆ. ಹಮೀರ್‌ಪುರ ಜಿಲ್ಲೆಯ ಮುಸ್ಕಾರಾ ಡೆವಲಪ್‌ಮೆಂಟ್ ಬ್ಲಾಕ್‌ನ ಉಮ್ರಿಯ ಬಾಲಕಿಯರ ಪ್ರಾಥಮಿಕ ಶಾಲೆಯ ಸಹಾಯಕ ಶಿಕ್ಷಕ ಆಶಿಶ್ ಕುಮಾರ್ ಆರ್ಯ ಅವರು ಹಮೀರ್‌ಪುರದ ಶ್ರೀವಿದ್ಯಾ ಮಂದಿರ ಇಂಟರ್ ಕಾಲೇಜಿನ ಮತದಾನ ಕೇಂದ್ರ 112 ರಲ್ಲಿ ಪೋಲಿಂಗ್ ಆಫೀಸರ್ ಕರ್ತವ್ಯಕ್ಕೆ ನಿಯೋಜಿಸಲ್ಪಟ್ಟರು.
ಆ ವೇಳೆ ಮತದಾನದ ದಿನದಂದು ಆರ್ಯ ತಮ್ಮ ಮೊಬೈಲ್ ಫೋನ್‌ನಲ್ಲಿ ಸೆಲ್ಫಿ ಜೊತೆಗೆ ಮತದಾರರ ಫೋಟೋಗಳನ್ನು ತೆಗೆದರು ಎಂದು ಆರೋಪಿಸಲಾಗಿದೆ. ಇದು ಚುನಾವಣಾ ಆಯೋಗದ ಸೂಚನೆಗಳ ಸ್ಪಷ್ಟ ಉಲ್ಲಂಘನೆಯಾಗಿದೆ ಎಂದು ಹಮೀರ್‌ಪುರದ ಜಿಲ್ಲಾ ಶಿಕ್ಷಣಾಧಿಕಾರಿ ರಿನ್ವಾ ಹೇಳಿದ್ದಾರೆ. ಚುನಾವಣಾ ಆಯೋಗದ ಸೂಚನೆ ಮೇರೆಗೆ ಆರ್ಯ ಅವರನ್ನು ಅಮಾನತುಗೊಳಿಸಲಾಗಿದೆ ಎಂದು ಅವರು ಹೇಳಿದರು.
Poll (Public Option)

Post a comment
Log in to write reviews