
ರಣಭೀಕರ ಬರದಿಂದ ಕಂಗೆಟ್ಟಿದ್ದ ಕರುನಾಡಲ್ಲಿ ಅಲ್ಪಸ್ವಲ್ಪ ಮಳೆ ಆಗುತ್ತಿದೆ. ಬಿಸಿಲಿನ ಬೇಗೆಗೆ ಬೆಂದುಹೋಗಿದ್ದ ಭೂಮಿ ಸ್ವಲ್ಪ ತಣ್ಣಗಾಗಿದೆ. ಆದರೆ ಕರ್ನಾಟಕದ ಡ್ಯಾಂಗಳು ಇನ್ನೂ ತುಂಬಿಲ್ಲ. ಸ್ವಲ್ಪ ಮಟ್ಟಿಗೆ ಕುಡಿಯೋಕಾದರೂ ನೀರು ಸಿಗುತ್ತಪ್ಪಾ ಅನ್ನೋವಷ್ಟರಲ್ಲೇ ಕಾವೇರಿ ನೀರು ಬಿಡಿ ಅಂತ ತಮಿಳುನಾಡು ಕಿರಿಕ್ ತೆಗೆದಿದೆ. ದೆಹಲಿಯಲ್ಲಿ ಕಾವೇರಿ ನೀರು ನಿರ್ವಹಣಾ ಪ್ರಾಧಿಕಾರ ಸಭೆ ನಡೆಯಿತು. ಸಭೆಯಲ್ಲಿ ಕರ್ನಾಟಕ ಪ್ರಾಧಿಕಾರಕ್ಕೆ ಮನವರಿಕೆ ಮಾಡಿದೆ. ಎರಡೂ ರಾಜ್ಯಗಳ ಮನವಿ ಬಳಿಕ ಪರಿಸರ ಮತ್ತು ಕನ್ನಡಿಗರ ಕುಡಿಯುವ ನೀರಿನ ಆದ್ಯತೆ ನೋಡಿಕೊಂಡು ತಮಿಳುನಾಡಿಗೆ ನೀರು ಬಿಡುವಂತೆ (CWMA) ಕಾವೇರಿ ವಾಟರ್ ಮ್ಯಾನೇಜ್‌ಮೆಂಟ್ ಅಥಾರಿಟಿ ಆದೇಶ ನೀಡಿದೆ. ಕಾವೇರಿ ನೀರು ನಿರ್ವಹಣಾ ಪ್ರಾಧಿಕಾರ ಸಭೆಯಲ್ಲಿ ಎರಡೂ ರಾಜ್ಯಗಳು ಕೂಡ ಕಾವೇರಿ ನೀರಿನ ವಿಚಾರವಾಗಿ ವಾದ ಮಂಡಿಸಿವೆ.
ಕರ್ನಾಟಕದ ಅಗತ್ಯತೆಗಳಿಗೆ ಸದ್ಯ 4 ಟಿಎಂಸಿ ನೀರು ಸಾಕು. ಮುಖ್ಯ ಅಣೆಕಟ್ಟುಗಳಲ್ಲಿ 19.17 ಟಿಎಂಸಿ ನೀರಿದೆ. ಹೀಗಾಗಿ ಕರ್ನಾಟಕ ತಮಿಳುನಾಡಿಗೆ ನೀರು ಹರಿಸಬೇಕು. ನೀರು ಬಿಡಲು ಅವರಿಗೆ ಯಾವುದೇ ತೊಂದರೆ ಇಲ್ಲ. ಈ ವರ್ಷ ಸಾಕಷ್ಟು ಮಳೆಯಾಗುವ ಮುನ್ಸೂಚನೆ ಸಿಕ್ಕಿದ್ದು, ಸದ್ಯಕ್ಕೆ ಆರು ಟಿಎಂಸಿ ನೀರನ್ನು ತಕ್ಷಣವೇ ಬಿಡಬೇಕು ಜುಲೈನಿಂದ ಡಿಸೆಂಬರ್‌ವರೆಗೆ ಬೆಳೆಗೆ ನಮಗೆ ನೀರುಬೇಕು ಎಂದು ತಮಿಳುನಾಡು ಸಿಡಬ್ಲ್ಯುಎಂಎ ಸಭೆಯಲ್ಲಿ ವಾದ ಮಂಡಿಸಿತ್ತು.
ತಮಿಳುನಾಡಿನ ತಿರುಪತ್ತೂರಿನಲ್ಲೂ ಧಾರಾಕಾರ ಮಳೆಯಾಗಿ ರಸ್ತೆಗಳು ಕೆರೆಯಂತಾಗಿವೆ. ಭಾರಿ ಪ್ರಮಾಣದಲ್ಲಿ ಮಳೆಯಾಗುತ್ತಿದೆ. ರಣಮಳೆಗೆ ತಮಿಳುನಾಡಲ್ಲಿ ಸಾವುನೋವುಗಳಾಗಿವೆ. ಆದರೂ ತಮಿಳುನಾಡು ನೀರಿಗಾಗಿ ಕ್ಯಾತೆ ತೆಗೆದಿರುವುದು ದುರಂತ.
Poll (Public Option)

Post a comment
Log in to write reviews