
ಬೆಂಗಳೂರು: ವಿಶ್ವಕಪ್ 20 ತಂಡಗಳು ಭಾಗಿಯಾಗಿದ್ದುಎಂಟು ತಂಡಗಳು ಸೂಪರ್ 8ಕ್ಕೆ ಅರ್ಹತೆ ಪಡೆದಿವೆ.
ಟೀಮ್ ಟ್ವೆಂಟಿ ವಿಶ್ವಕಪ್ ನಲ್ಲಿ 20 ತಂಡಗಳಿದ್ದು 12 ತಂಡಗಳು ವಿಶ್ವಕಪ್ ಪಯಣ ಅಂತ್ಯಗೊಳಿಸಿವೆ. ಇನ್ನುಳಿದ ಎಂಟು ತಂಡಗಳು ಸೂಪರ್ 8 ಗೆ ಅರ್ಹತೆ ಪಡೆದಿವೆ. ಸೂಪರ್ 8 ಹಂತದಲ್ಲಿರುವ ಈ 8 ತಂಡಗಳನ್ನು ತಲಾ ನಾಲ್ಕರಂತೆ ಗುಂಪುಗಳಾಗಿ ವಿಂಗಡಿಸಲಾಗಿದೆ.
ಜೂನ್ 19ರಿಂದ ಸೂಪರ್ 8 ಪಂದ್ಯಗಳು ವೆಸ್ಟ್ಇಂಡಿಸ್ ನಲ್ಲಿ ಆರಂಭವಾಗಲಿದೆ. ಸೂಪರ್ 8 ಸುತ್ತಿಗೆ ಭಾರತ, ಆಸ್ಟ್ರೇಲಿಯಾ, ದಕ್ಷಿಣ ಆಫ್ರಿಕಾ, ವೆಸ್ಟ್ ಇಂಡೀಸ್, ಯುಎಸ್ಎ, ಇಂಗ್ಲೆಂಡ್, ಅಫ್ಘಾನಿಸ್ತಾನ ಮತ್ತು ಬಾಂಗ್ಲಾದೇಶದ ತಂಡಗಳು ಅರ್ಹತೆ ಪಡೆದಿವೆ. ಈ ಎಲ್ಲಾ ತಂಡಗಳನ್ನು ಎರಡು ಗುಂಪುಗಳಾಗಿ ವಿಂಗಡಿಸಲಾಗಿದೆ.
ಸೂಪರ್-8 ರ ಮೊದಲ ಗುಂಪು- ಭಾರತ, ಆಸ್ಟ್ರೇಲಿಯಾ, ಅಫ್ಘಾನಿಸ್ತಾನ ಮತ್ತು ಬಾಂಗ್ಲಾದೇಶ.
ಸೂಪರ್-8 ರ ಎರಡನೇ ಗುಂಪು – ಅಮೆರಿಕ, ಇಂಗ್ಲೆಂಡ್, ದಕ್ಷಿಣ ಆಫ್ರಿಕಾ ಮತ್ತು ವೆಸ್ಟ್ ಇಂಡೀಸ್.
Poll (Public Option)

Post a comment
Log in to write reviews