ಟಿ20 ವಿಶ್ವಕಪ್ : ಕ್ರಿಕೆಟ್ ಶಿಶು ಅಮೆರಿಕದ ಮುಂದೆ ಹೀನಾಯವಾಗಿ ಸೋತ ಪಾಕಿಸ್ತಾನ..!
ಡಲ್ಲಾಸ್ (ಅಮೇರಿಕಾ) : ಟಿ20 ವಿಶ್ವಕಪ್ ಟೂರ್ನಿಯ ಆರಂಭದಲ್ಲೇ ಭಾರೀ ಆಘಾತ ಅನುಭವಿಸಿರುವ ಪಾಕಿಸ್ತಾನ, ಕ್ರಿಕೆಟ್ ಶಿಶು ಅಮೇರಿಕಾದ ಎದುರು ಹೀನಾಯ ಸೋಲುಂಡಿದೆ. ಟಿ20 ವಿಶ್ವಕಪ್ ಟೂರ್ನಿಯಲ್ಲಿ ಉತ್ತಮ ಫಲಿತಾಂಶ ನೀಡುವ ಹುಮ್ಮಸ್ಸಿನಲ್ಲಿದ್ದ ಬಾಬರ್ ಅಜಮ್ ನೇತೃತ್ವದ ಪಾಕಿಸ್ತಾನ ತಂಡಕ್ಕೆ ಅಮೇರಿಕಾ ಆಘಾತ ನೀಡಿದ್ದು, ಪಾಕಿಸ್ತಾನ ತಂಡದ ಕಳಪೆ ಪ್ರದರ್ಶನ ತೀವ್ರ ಟೀಕೆಗೆ ಗುರಿಯಾಗಿದೆ.
ಡಲ್ಲಾಸ್‌ನಲ್ಲಿ ನಡೆದ ತನ್ನ ಮೊದಲ ಪಂದ್ಯದಲ್ಲಿ ಟಾಸ್ ಸೋತು ಮೊದಲು ಬ್ಯಾಟ್ ಮಾಡಿದ ಪಾಕಿಸ್ತಾನ ತಂಡ 7 ವಿಕೆಟ್ ನಷ್ಟಕ್ಕೆ 159 ರನ್ ಗಳಿಸಿತು. ಈ ಮೊತ್ತವನ್ನು ಬೆನ್ನತ್ತಿನ ಅಮೇರಿಕಾ ತಂಡ ಉತ್ತಮ ಆರಂಭ ಪಡೆಯಿತು. ನಂತರ ಅಮೆರಿಕಕ್ಕೆ ಕೊನೆಯ ಓವರ್ನಲ್ಲಿ ಗೆಲ್ಲಲು 15 ರನ್ ಬೇಕಿತ್ತು. ಈ ವೇಳೆ ಪಾಕಿಸ್ತಾನ ವೇಗಿ ಹ್ಯಾರಿಸ್ ರೌಫ್ ಮೊದಲ ಮೂರು ಎಸೆತದಲ್ಲಿ ಕೇವಲ 1 ರನ್ ನೀಡಿ ಗೆಲ್ಲಿಸುವ ಮೂನ್ಸೂಚನೆ ನೀಡಿದರು. ಆದರೆ 4ನೇ ಎಸೆತದಲ್ಲಿ ಬ್ಯಾಟರ್ ಆರನ್ ಜೋನ್ಸ್ ಭರ್ಜರಿ ಸಿಕ್ಸರ್ ಬಾರಿಸಿದರು. ಬಳಿಕ 5ನೇ ಎಸೆತದಲ್ಲಿ 1 ರನ್ ಗಳಿಸಿದರು. 6ನೇ ಎಸೆತದಲ್ಲಿ ಬ್ಯಾಟರ್ ನಿತೀಶ್ ಕುಮಾರ್ ಬೌಂಡರಿ ಹೊಡೆಯುವ ಪಂದ್ಯ ಟೈನಲ್ಲಿ ಕೊನೆಗೊಂಡಿತು.
ಸೂಪರ್ ಓವರ್ :
ಸೂಪರ್ ಓವರ್ನಲ್ಲಿ ಮೊದಲು ಬ್ಯಾಟ್ ಮಾಡಿದ ಅಮೇರಿಕಾ ತಂಡ, ವೇಗಿ ಅಮೀರ್ ಎಸೆದ ಸೂಪರ್ ಓವರ್ನಲ್ಲಿ 18 ರನ್ ಗಳಿಸಿತು. ಇದರಲ್ಲಿ ಇತರೆ ರೂಪದಲ್ಲಿ 7 ರನ್ ಬಿಟ್ಟುಕೊಟ್ಟಿದ್ದು ಪಾಕಿಸ್ತಾನಕ್ಕೆ ದುಬಾರಿಯಾಯಿತು. ಅಮೇರಿಕಾ ನೀಡಿದ 19 ರನ್ಗಳ ಗುರಿಯನ್ನು ಬೆನ್ನಟ್ಟಿದ ಪಾಕಿಸ್ತಾನ 1 ವಿಕೆಟ್ ನಷ್ಟಕ್ಕೆ ಕೇವಲ 13 ರನ್ಗಳಿಸಿ ಸೋಲುಂಡಿತು.
ಮೊದಲು ಬ್ಯಾಟ್ ಮಾಡಿದ ಪಾಕಿಸ್ತಾನದ ಪರವಾಗಿ ಬಾಬರ್ ಅಜಂ 44 ರನ್, ಶಾದಾಬ್ ಖಾನ್ 40 ರನ್ ಇಫ್ತಿಕಾರ್ ಅಹ್ಮದ್ ಔಟಾಗದೇ 18 ರನ್, ಶಾಹೀನ್ ಅಫ್ರಿದಿ ಔಟಾಗದೇ 23 ರನ್ ಗಳಿಸಿದರು. ಅಮೆರಿಕ ಪರ ಮೊನಾಂಕ್ ಪಟೇಲ್ 50 ರನ್, ಅಂಡ್ರಿಸ್ ಗೌಸ್ 35 ರನ್, ಆರನ್ ಜೋನ್ಸ್ ಔಟಾಗದೇ 36 ರನ್, ನಿತೀಶ್ ಕುಮಾರ್ ಔಟಾಗದೇ 14 ರನ್ ಗಳಿಸಿ ಗೆಲುವಿಗೆ ಕಾರಣರಾದರು.
Post a comment
Log in to write reviews