‘ಸೂರ್ಯಾಸ್ ಸ್ಯಾಟರ್ಡೆ’ ಕನ್ನಡದಲ್ಲಿ ಬಿಡುಗಡೆ: ಸಿನಿಮಾ ಪ್ರಚಾರಕ್ಕೆ ಬೆಂಗಳೂರಿಗೆ ಬಂದ ನಾನಿ

ನ್ಯಾಚುರಲ್ ಸ್ಟಾರ್ ಎಂದೇ ಜನಪ್ರಿಯವಾಗಿರುವ ತೆಲುಗಿನ ನಟ ನಾನಿ. ಅವರ ‘ಸರಿಪೋದಾ ಶನಿವಾರಂ’ ತೆಲುಗು ಸಿನಿಮಾ ಕನ್ನಡದಲ್ಲಿ ಬಿಡುಗಡೆ ಆಗಲಿದೆ. ಈ ಸಿನಿಮಾದ ಪ್ರಚಾರಕ್ಕೆ ನಟ ನಾನಿ ಬೆಂಗಳೂರಿಗೆ ಆಗಮಿಸಿದ್ದಾರೆ.
‘ಸರಿಪೋದಾ ಶನಿವಾರಂ’ ತೆಲುಗು ಸಿನಿಮಾ ಇದೀಗ ಕನ್ನಡದಲ್ಲಿ ‘ಸೂರ್ಯಾಸ್ ಸ್ಯಾಟರ್ಡೆ’ ಹೆಸರಿನಲ್ಲಿ ಬಿಡುಗಡೆ ಆಗುತ್ತಿದೆ.
ಈ ಹಿಂದೆ ತಮ್ಮ ನಟನೆಯ ‘ದಸರಾ’ ಸೇರಿದಂತೆ ಇನ್ನೂ ಕೆಲವು ಸಿನಿಮಾಗಳ ಪ್ರಚಾರಕ್ಕಾಗಿ ನಾನಿ ಬೆಂಗಳೂರಿಗೆ ಬಂದಿದ್ದರು. ಬೆಂಗಳೂರು ಅವರಿಗೆ ಹೊಸದೇನೂ ಅಲ್ಲ. ಈ ಹಿಂದೆ ಕೆಲ ಬಾರಿ ಬೆಂಗಳೂರಿಗೆ ಬಂದಿದ್ದಾರೆ.
ನಾನಿ ಹಾಗೂ ಕಿಚ್ಚ ಸುದೀಪ್ ಈ ಹಿಂದೆ ರಾಜಮೌಳಿಯ ‘ಈಗ’ ಸಿನಿಮಾದಲ್ಲಿ ಒಟ್ಟಿಗೆ ನಟಿಸಿದ್ದರು. ಸುದೀಪ್ ಜೊತೆಗೆ ನಾನಿಗೆ ಉತ್ತಮ ಗೆಳೆತನವಿದೆ. ಇತ್ತೀಚೆಗಷ್ಟೆ ‘ಈಗ 2’ ಬಗ್ಗೆ ನಾನಿ ಮಾತನಾಡಿದ್ದಾರೆ.
ನಾನಿ ನಟಿಸಿರುವ ‘ಸರಿಪೋದಾ ಶನಿವಾರಂ’ (ಕನ್ನಡದಲ್ಲಿ ಸೂರ್ಯಾಸ್ ಸ್ಯಾಟರ್ಡೆ) ಭಿನ್ನ ಕತೆ ಹೊಂದಿರುವ ಸಿನಿಮಾ. ಶನಿವಾರ ಮಾತ್ರವೇ ಅನ್ಯಾಯದ ವಿರುದ್ಧ ಹೋರಾಡುವ ನಾಯಕನ ಕತೆ ಇದು.
ಸಿನಿಮಾವನ್ನು ವಿವೇಕ್ ಆತ್ರೇಯ ನಿರ್ದೇಶನ ಮಾಡಿದ್ದಾರೆ. ಸಿನಿಮಾದಲ್ಲಿ ಪ್ರಿಯಾಂಕಾ ಮೋಹನ್ ನಾಯಕಿ. ತಮಿಳಿನ ಎಸ್ಜೆ ಸೂರ್ಯ ವಿಲನ್. ಸಿನಿಮಾ ಆಗಸ್ಟ್ 29ಕ್ಕೆ ಕನ್ನಡ, ತೆಲುಗು, ತಮಿಳು ಹಾಗೂ ಮಲಯಾಳಂ ಭಾಷೆಯಲ್ಲಿ ಬಿಡುಗಡೆ ಆಗಲಿದೆ.
ನ್ಯಾಚುರಲ್ ಸ್ಟಾರ್ ನಾನಿ ನಟನೆಯ ‘ದಸರಾ’ ಸಿನಿಮಾದಲ್ಲಿ ಕನ್ನಡದ ನಟ ದೀಕ್ಷಿತ್ ಶೆಟ್ಟಿ ಸಹ ಮುಖ್ಯ ಪಾತ್ರದಲ್ಲಿ ನಟಿಸಿದ್ದನ್ನು ಸಹ ಇಲ್ಲಿ ಸ್ಮರಿಸಬಹುದು.
Poll (Public Option)

Post a comment
Log in to write reviews