ಸೂರಜ್ ರೇವಣ್ಣನ ಮೇಲೆ ಮತ್ತೊಂದು ಸಲಿಂಗಕಾಮ ಲೈಂಗಿಕ ದೌರ್ಜನ್ಯ ಆರೋಪದಲ್ಲಿ 2ನೇ ಕೇಸ್ ದಾಖಲು

ಹಾಸನ: ಸಿಐಡಿ ವಶದಲ್ಲಿರುವ ವಿಧಾನ ಪರಿಷತ್ ಜೆಡಿಎಸ್ ಸದಸ್ಯ ಸೂರಜ್ ರೇವಣ್ಣ ವಿರುದ್ಧ ಹೊಳೆನರಸೀಪುರ ಗ್ರಾಮಾಂತರ ಠಾಣೆಯಲ್ಲಿ ಮತ್ತೊಂದು ಎಫ್ಐಆರ್ ದಾಖಲಾಗಿದೆ.
ಹೊಳೆನರಸೀಪುರ ತಾಲೂಕಿನ ಯುವಕನೊಬ್ಬ ಮೂರು ವರ್ಷಗಳ ಹಿಂದೆ ತನ್ನ ಮೇಲೆ ಸೂರಜ್ ರೇವಣ್ಣ ಸಲಿಂಗಕಾಮ ಲೈಂಗಿಕ ದೌರ್ಜನ್ಯ ಎಸಗಿದ್ದರು ಎಂದು ದೂರು ನೀಡಿದ್ದು, ಈ ದೂರಿನ ಮೇರೆಗೆ ಹೊಳೆನರಸೀಪುರ ಗ್ರಾಮಾಂತರ ಠಾಣೆಯಲ್ಲೇ ಸೂರಜ್ ವಿರುದ್ಧ ಐಪಿಸಿ ಸೆಕ್ಷೆನ್ 377,342,506 ಅಡಿ ಎಫ್ಐಆರ್ ದಾಖಲಾಗಿದೆ.
ಅಚ್ಚರಿ ಅಂದರೆ, ಈ ಹಿಂದೆ ಮೊದಲ ಕೇಸ್ ನ ಸಂತ್ರಸ್ತನ ವಿರುದ್ಧವೇ ದೂರು ನೀಡಿದ್ದವ ಇದೀಗ ಸೂರಜ್ ವಿರುದ್ಧ ಸಲಿಂಗಕಾಮ ಲೈಂಗಿಕ ದೌರ್ಜನ್ಯ ಕೇಸ್ ದಾಖಲಿಸಿದ್ದಾರೆ. ಮೂರು ವರ್ಷಗಳ ಹಿಂದೆ ತನ್ನ ಮೇಲೆ ಸಲಿಂಗಕಾಮ ಲೈಂಗಿಕ ದೌರ್ಜನ್ಯ ಎಸಗಿದ್ದರು ಎಂದು ಆರೋಪಿಸಿ ಸೂರಜ್ ರೇವಣ್ಣ ಆಪ್ತನಾಗಿದ್ದ ಹೊಳೆನರಸೀಪುರ ತಾಲ್ಲೂಕು ಮೂಲದ ಯುವಕ ದೂರು ನೀಡಿದ್ದಾನೆ. ಈ ಮೂಲಕ ಹೊಳೆನರಸೀಪುರ ಗ್ರಾಮಾಂತರ ಠಾಣೆಯಲ್ಲೇ ಸೂರಜ್ ವಿರುದ್ಧ ಎರಡನೇ ಕೇಸ್ ದಾಖಲಾದಂತಾಗಿದೆ.
ಎರಡನೇ ಕೇಸ್ನ ಸಂತ್ರಸ್ತ ಜೂನ್ 21 ರಂದು ಸೂರಜ್ ಅವರನ್ನ ಬ್ಲಾಕ್ ಮೇಲ್ ಮಾಡಲಾಗುತ್ತಿದೆ ಎಂದು ಮೊದಲ ಪ್ರಕರಣದ ಸಂತ್ರಸ್ತನ ವಿರುದ್ಧ ದೂರು ನೀಡಿದ್ದ. ಆದ್ರೆ, ಇದೀಗ ಆಪ್ತ ಉಲ್ಟಾ ಹೊಡೆದು ಸೂರಜ್ ವಿರುದ್ಧವೇ ಗಂಭೀರ ಆರೋಪ ಮಾಡಿದ್ದಾರೆ. ಅಲ್ಲದೇ ಅರಕಲಗೂಡು ಮೂಲದ ಯುವಕನ (ಮೊದಲ ಪ್ರಕರಣದ ಸಂತ್ರಸ್ತ) ವಿರುದ್ಧ ದೂರು ನೀಡಲು ಸೂರಜ್ ಒತ್ತಡ ಹಾಕಿದ್ದರು ಎಂದು ದೂರಿನಲ್ಲಿ ಉಲ್ಲೇಖಿಸಿದ್ದಾರೆ. ಇದರಿಂದ ಸೂರಜ್ ಮತ್ತೊಂದು ಕಂಟಕ ಎದುರಾಗಿದೆ. ಮೊದಲ ಪ್ರಕರಣ ಸಂಬಂಧ ಇಂದು ಹಾಸನಕ್ಕೆ ಸೂರಜ್ ರೇವಣ್ಣನ್ನು ಕೊಂಡೊಯ್ದು ಮಹಜರ್ ಮಾಡುಡು ಸಾಧ್ಯತೆಯಿದೆ.
Poll (Public Option)

Post a comment
Log in to write reviews