
ಹಾಸನ : ಚಿತ್ರತಾರೆ ಸನ್ನಿ ಲಿಯೋನ್ ಕರ್ನಾಟಕದ ಹಾಸನಕ್ಕೆ ಆಗಮಿಸಿದ್ದಾರೆ.
ತಮಿಳು ಸಿನಿಮಾವೊಂದರ ಚಿತ್ರೀಕರಣಕ್ಕೆ ಎಂದು ಅವರು ಹಾಸನದ ಚೆನ್ನರಾಯಪಟ್ಟಣದ ಕಬ್ಬಳ್ಳಿ ಗ್ರಾಮಕ್ಕೆ ಬಂದಿದ್ದು, ಈ ವೇಳೆ ಸ್ಥಳೀಯ ಸರ್ಕಾರಿ ಶಾಲಾ ಮಕ್ಕಳ ಜೊತೆ ಸನ್ನಿ ಲಿಯೋನ್ ಕಾಲ ಕಳೆದಿದ್ದಾರೆ.
ಸನ್ನಿ ಲಿಯೋನ್ ಅವರ ಮುಂಬರುವ ತಮಿಳು ಚಿತ್ರ ‘ಕೊಟೇಶನ್ ಗ್ಯಾಂಗ್‌ನ’ ಫಸ್ಟ್ ಲುಕ್ ಅನ್ನು ಬಿಡುಗಡೆ ಮಾಡಿದ್ದು. ಇದನ್ನು ವಿವೇಕ್ ಕೆ ಕಣ್ಣನ್ ನಿರ್ದೇಶಿಸಿದ್ದಾರೆ. ಚಿತ್ರದಲ್ಲಿ ಜಾಕಿ ಶ್ರಾಫ್, ಸನ್ನಿ ಲಿಯೋನ್ ಮತ್ತು ಪ್ರಿಯಾಮಣಿ ಪ್ರಮುಖ ಪಾತ್ರಗಳಲ್ಲಿ ನಟಿಸಿದ್ದಾರೆ. ಕೊಟೇಶನ್ ಗ್ಯಾಂಗ್‌ನ ಫಸ್ಟ್ ಲುಕ್‌ನಲ್ಲಿ ಸನ್ನಿ ಲಿಯೋನ್ ಗ್ರಾಮೀಣ ಮಾಫಿಯಾ ಗ್ಯಾಂಗ್‌ನ ಸದಸ್ಯ ಪಾತ್ರದಲ್ಲಿ ಕಾಣಿಸಿಕೊಳ್ಳದಿದ್ದಾರೆ. ವೈರಲ್ ಆಗಿರುವ ವಿಡಿಯೋದಲ್ಲಿ ಸನ್ನಿ ಲಿಯೋನ್ ಶಾಲೆಗೆ ಬಂದಿದ್ದು, ವಿದ್ಯಾರ್ಥಿಗಳು ಆಕೆಯನ್ನು ನೋಡಿ ಥ್ರಿಲ್ ಆಗಿದ್ದಾರೆ.
Poll (Public Option)

Post a comment
Log in to write reviews