
ಕೋಲಾರ: ಜಿಲ್ಲೆಯ ಹೊರವಲಯದ ಟಮಕ ರಾಷ್ಟ್ರೀಯ ಹೆದ್ದಾರಿ ಪಕ್ಕದಲ್ಲಿ ಅಲಾರಾಂ ರೀತಿಯ ಶಬ್ದ ಕೇಳಿ ಬರುತ್ತಿದ್ದ ಸೂಟ್ಕೇಸ್ ಪತ್ತೆಯಾಗಿದ್ದು ಕೆಲ ಹೊತ್ತು ಸ್ಥಳೀಯರಲ್ಲಿ ಆತಂಕದ ವಾತವರಣ ಮೂಡಿತ್ತು.
ಸೂಟ್ಕೇಸ್ನಿಂದ ಅಲಾರಾಂ ರೀತಿಯ ಶಬ್ದ ಕೇಳಿ ಬರುತ್ತಿದ್ದ ಹಿನ್ನೆಲೆಯಲ್ಲಿ ಬಾಂಬ್ ಇರಬಹುದು ಎಂದು ಹೆದರಿದ ಸ್ಥಳೀಯರು ಪೊಲೀಸರಿಗೆ ಮಾಹಿತಿ ನೀಡಿದರು. ವಿಚಾರ ತಿಳಿಯುತ್ತಿದ್ದಂತೆ ಗಲ್ಪೇಟೆ ಠಾಣೆ ಪೊಲೀಸರಾದ, ಎಸ್ಪಿ ನಿಖಿಲ್, ಹೆಚ್ಚುವರಿ ಎಸ್ಪಿ ರವಿಶಂಕರ್ ಹಾಗು ಬಾಂಬ್ ನಿಷ್ಕ್ರಿಯ ದಳ, ಶ್ವಾನದಳ ಮತ್ತು ಅಗ್ನಿಶಾಮಕ ದಳ ಸಿಬ್ಬಂದಿ ಆಗಮಿಸಿದರು.
ಬಳಿಕ, ಬಾಂಬ್ ನಿಷ್ಕ್ರಿಯ ದಳ ಪರಿಶೀಲನೆ ನಡೆಸಿದಾಗ, ಅದು ಕ್ರೌನ್ ಕಂಪನಿಯ ಸೂಟ್ಕೇಸ್ ಎಂದು ತಿಳಿಯಿತು. ಸೆನ್ಸಾರ್ ಸೂಟ್ಕೇಸ್ ಆಗಿದ್ದು, ಯಾರೋ ಲಾಕರ್ ಪಾಸ್ವರ್ಡ್ ಅನ್ನು ತಪ್ಪಾಗಿ ಹಾಕಿದ್ದರಿಂದ ಶಬ್ದ ಬಂದಿದೆ ಎಂದು ಮಾಹಿತಿ ನೀಡಿದರು.
Poll (Public Option)

Post a comment
Log in to write reviews