ಆಂಧ್ರಪ್ರದೇಶ: ಭಾರತೀಯ ಬಾಹ್ಯಾಕಾಶ ಸಂಶೋಧನಾ ಸಂಸ್ಥೆಯ (ISRO) ಭೂ ವೀಕ್ಷಣಾ ಉಪಗ್ರಹ-08 ಭೂ ಪರಿವೀಕ್ಷಣಾ ಉಪಗ್ರಹವನ್ನು ಹೊತ್ತ ಎಸ್‌ಎಸ್‌ಎಲ್‌ವಿ-ಡಿ3 ರಾಕೆಟ್ ಅನ್ನು ಇಂದು (ಆಗಸ್ಟ್ 16) ಶ್ರೀಹರಿಕೋಟಾದ ಸತೀಶ್ ಧವನ್ ಬಾಹ್ಯಾಕಾಶ ಕೇಂದ್ರದಿಂದ ಯಶಸ್ವಿಯಾಗಿ ಉಡಾವಣೆ ಮಾಡಲಾಗಿದೆ.
ಪಿಎಸ್ಎಲ್‌ವಿ- ಸಿ58/ಎಕ್ಸ್ಪೋಸಾಟ್ ಹಾಗೂ ಜಿಎಸ್ಎಲ್ವಿ-ಎಫ್14/ಇನ್ಸಾಟ್-3ಡಿಎಸ್ ಮಿಷನ್‌ಗಳ ಯಶಸ್ವಿ ಉಡಾವಣೆ ಬಳಿಕ 2024ರಲ್ಲಿ ಇದು ಇಸ್ರೋದ ಮೂರನೇ ಯಶಸ್ವಿ ಉಡಾವಣೆಯಾಗಿದೆ. ಈ ಮೂಲಕ ಚಂದ್ರಯಾನ-3ರ ಬಳಿಕ ಇಸ್ರೋ ಮತ್ತೊಂದು ಮೈಲಿಗಲ್ಲು ಸಾಧಿಸಿದೆ.
ಶ್ರೀಹರಿಕೋಟಾದಿಂದ ಭೂ ವೀಕ್ಷಣಾ ಉಪಗ್ರಹ 'ಇಒಎಸ್-08' ಉಡ್ಡಯನ ಯಶಸ್ವಿಯಾಗಿದೆ ಎಂದು ಭಾರತೀಯ ಬಾಹ್ಯಾಕಾಶ ಸಂಶೋಧನಾ ಸಂಸ್ಥೆ ತಿಳಿಸಿದೆ.
Post a comment
Log in to write reviews