
ಕೊಪ್ಪಳ: ತುಂಗಭದ್ರಾ ಜಲಾಶಯದ 19ನೇ ಗೇಟ್ ಕೊಚ್ಚಿ ಹೋದ 6 ದಿನಗಳ ಬಳಿಕ ತಾತ್ಕಾಲಿಕವಾಗಿ 13 ಟನ್ ತೂಕದ 1 ಗೇಟ್ ಅಳವಡಿಸುವ ಕಾರ್ಯ ಶುಕ್ರವಾರ ರಾತ್ರಿ ಯಶಸ್ವಿಯಾಗಿದೆ. ಬಳಿಕ ಅಲ್ಲದವರ ಸಂಭ್ರಮ ಮುಗಿಲು ಮುಟ್ಟಿದ್ದು, ಕೆಕೆ ಹಾಕಿ ಸಂಭ್ರಮಿಸಿದರು. ಕೊಪ್ಪಳ ಜಿಲ್ಲಾ ಉಸ್ತುವಾರಿ ಸಚಿವ ಶಿಚರಾಜ ತಂಗಡಗಿ ಅವರು ತಜ್ಞ ಕನ್ಹಯ್ಯ ನಾಯ್ಡು ಅವರಿಗೆ ಸಿಹಿ ತಿನ್ನಿಸಿದರು. ಸಂಸದ ರಾಜಶೇಖರ ಹಿಟ್ನಾಳ ಹಾಗೂ ಸಚಿವ ಶಿವರಾಜ ತಂಗಡಗಿ ಪರಸ್ಪರ ಸಿಹಿ ತಿನ್ನಿಸಿ ಸಂಭ್ರಮಿಸಿದರು. ಇನ್ನೂ 4 ಗೇಟ್ ಅಳವಡಿಸಿದರೆ ನೀರು ಸಂಪೂರ್ಣ ನಿಲುಗಡೆಯಾಗಲಿದೆ.
Poll (Public Option)

Post a comment
Log in to write reviews