
ಬೆಂಗಳೂರು: ನೀಟ್ ಪರೀಕ್ಷೆಯ ಫಲಿತಾಂಶದಲ್ಲಿ ಅಕ್ರಮ ಆರೋಪಗಳು ಕಂಡು ಬಂದಿದ್ದು ವಿದ್ಯಾರ್ಥಿಗಳು ಪ್ರತಿಭಟನೆ ನಡೆಸುತ್ತಿದ್ದಾರೆ.
ನೀಟ್ ಪರೀಕ್ಷೆಯ ಫಲಿತಾಂಶ ಬಂದಾಗಿನಿಂದ ವಿದ್ಯಾರ್ಥಿಗಳಿಗೆ ಒಂದಲ್ಲ ಒಂದು ಗೊಂದಲಗಳು ಹುಟ್ಟಿಕೊಳ್ಳುತ್ತಾನೆ ಇವೆ. ಪರೀಕ್ಷೆಯ ಫಲಿತಾಂಶದಲ್ಲಿ ಭಾರೀ ಅವ್ಯವಹಾರಗಳು ಕಂಡುಬಂದಿದ್ದು ಅರ್ಹವಿಲ್ಲದ ವಿದ್ಯಾರ್ಥಿಗಳು ಪರೀಕ್ಷೆಯಲ್ಲಿ ಉತ್ತೀರ್ಣರಾಗಿದ್ದಾರೆ. ಪಿಯು ಅಲ್ಲಿ ಫೇಲಾಗಿದ್ದ ವಿದ್ಯಾರ್ಥಿನಿ ಪರೀಕ್ಷೆಯಲ್ಲಿ ಟಾಪರ್ ಆಗಿದ್ದಾರೆ ಫೇಲಾದ ವಿದ್ಯಾರ್ಥಿ ಟಾಪ್ ನಲ್ಲಿ ಬರಲು ಹೇಗೆ ಸಾಧ್ಯ. 67 ಜನರಿಗೆ 720ಕ್ಕೆ 720 ಮಾರ್ಕ್ಸ್ ಬಂದಿದೆ. ಅಷ್ಟೇ ಅಲ್ದೆ ಒಂದೇ ಸೆಂಟ್ರನಲ್ಲಿ 7-8 ವಿದ್ಯಾರ್ಥಿಗಳಿಗೆ ಔಟ್ ಆಫ್ ಔಟ್ ಮಾರ್ಕ್ಸ್ ಸಿಕ್ಕಿದೆ ಇದು ಅಸಾಧ್ಯವಾದದ್ದು ಇಲ್ಲಿ ಅವ್ಯವಹಾರ ನಡೆಯುತ್ತಿದೆ ಇದರ ಹಿಂದೆ ಟ್ಯೂಷನ್ ಮಾಫಿಯಾ ಭಾಗಿಯಾಗಿದೆ. ಇದನ್ನು ನಾವು ಖಂಡಿಸಬೇಕು ಎಂದು ಎಬಿವಿಪಿ ಸಹಾಯದಿಂದ ಫ್ರೀಡಂ ಪಾರ್ಕ್ ನಲ್ಲಿ ವಿದ್ಯಾರ್ಥಿಗಳು ಪ್ರತಿಭಟನೆ ನಡೆಸಿದ್ದು ನೀಟ್ ಫಲಿತಾಂಶದ ಬಗ್ಗೆ ವಿದ್ಯಾರ್ಥಿಗಳು ಆಕ್ರೋಶ ಹೊರ ಹಾಕುತ್ತಿದ್ದಾರೆ. ಈ ಪ್ರಕರಣವನ್ನು ಸಿಬಿಐ ಮೂಲಕ ತನಿಖೆ ಮಾಡಬೇಕೆಂದು ಎವಿಬಿಪಿ ಆಗ್ರಹಿಸಿದೆ.
Poll (Public Option)

Post a comment
Log in to write reviews