ಗಳಿಕೆಯಲ್ಲಿ ‘ಕಲ್ಕಿ’ ಚಿತ್ರವನ್ನೂ ಹಿಂದಿಕ್ಕಿದ ‘ಸ್ತ್ರೀ 2’ : ಒಟ್ಟೂ ಕಲೆಕ್ಷನ್ ಎಷ್ಟು?

ಶ್ರದ್ಧಾ ಕಪೂರ್ ಹಾಗೂ ರಾಜ್ಕುಮಾರ್ ರಾವ್ ನಟನೆಯ ‘ಸ್ತ್ರೀ 2’ ಸಿನಿಮಾ ಬಾಕ್ಸ್ ಆಫೀಸ್ನಲ್ಲಿ ಭರ್ಜರಿ ಕಮಾಯಿ ಮಾಡುತ್ತಿದೆ. ಈ ಸಿನಿಮಾ ರಿಲೀಸ್ ಆಗಿ 8 ದಿನಗಳು ಕಳೆದಿವೆ. ಆಗಸ್ಟ್ 22 ಈ ಚಿತ್ರ ಬರೋಬ್ಬರಿ 16 ಕೋಟಿ ರೂಪಾಯಿ ಗಳಿಕೆ ಮಾಡಿದೆ. ಈ ಮೂಲಕ ಚಿತ್ರದ ಒಟ್ಟಾರೆ ಗಳಿಕೆ 290 ಕೋಟಿ ರೂಪಾಯಿ ಆಗಿದೆ. ವಿಶ್ವ ಬಾಕ್ಸ್ ಆಫೀಸ್ನಲ್ಲಿ ಈ ಸಿನಿಮಾ 400 ಕೋಟಿ ರೂಪಾಯಿ ಕಲೆಕ್ಷನ್ ಮಾಡಿದೆ.
ರಾಜ್ಕುಮಾರ್ ರಾವ್ ಹಾಗೂ ಶ್ರದ್ಧಾ ಕಪೂರ್ ಅವರ ವೃತ್ತಿ ಜೀವನದಲ್ಲಿ ಇಷ್ಟು ದೊಡ್ಡ ಮಟ್ಟದ ಯಶಸ್ಸು ಸಿಕ್ಕಿದ್ದು ಇದೇ ಮೊದಲು. ಈ ಸಿನಿಮಾಗೆ ದಿನ ಕಳೆದಂತೆ ಶೋಗಳ ಸಂಖ್ಯೆ ಹೆಚ್ಚುತ್ತಿದೆ. ವಿಶ್ವಾದ್ಯಂತ ಈ ಸಿನಿಮಾ 401 ಕೋಟಿ ರೂಪಾಯಿ ಗಳಿಕೆ ಮಾಡಿದೆ. ಈ ವಾರವರೂ ಸಿನಿಮಾ ಉತ್ತಮ ಕಲೆಕ್ಷನ್ ಮಾಡುವ ನಿರೀಕ್ಷೆ ಇದೆ. ಕರ್ನಾಟಕದಲ್ಲೂ ಚಿತ್ರ ಹೌಸ್ಫುಲ್ ಪ್ರದರ್ಶನ ಕಾಣುತ್ತಿದೆ.
‘ಕಲ್ಕಿ 2898 ಎಡಿ’ ಹಿಂದಿ ವರ್ಷನ್ ಕಲೆಕ್ಷನ್ ವಿಚಾರಕ್ಕೆ ಬಂದರೆ ‘ಸ್ತ್ರೀ 2’ ಸಿನಿಮಾ ಮೇಲುಗೈ ಸಾಧಿಸಿದೆ. ‘ಕಲ್ಕಿ 2898 ಎಡಿ’ ಹಿಂದಿ ವರ್ಷನ್ನಿಂದ 293 ಕೋಟಿ ರೂಪಾಯಿ ಬಂದಿದೆ. ‘ಫೈಟರ್’ 200 ಕೋಟಿ ರೂಪಾಯಿ ಕಲೆಕ್ಷನ್ ಮಾಡಿತ್ತು. ಇವುಗಳನ್ನು ‘ಸ್ತ್ರೀ 2’ ಸಿನಿಮಾ ಹಿಂದಿಕ್ಕಿದೆ. ಈ ವರ್ಷ ರಿಲೀಸ್ ಆದ ಯಶಸ್ವಿ ಸಿನಿಮಾಗಳ ಸಾಲಿನಲ್ಲಿ ‘ಸ್ತ್ರೀ 2’ ಚಿತ್ರಕ್ಕೆ ಸ್ಥಾನ ಸಿಕ್ಕಿದೆ.
ಸ್ತ್ರೀ’ ಚಿತ್ರ 2018ರಲ್ಲಿ ರಿಲೀಸ್ ಆಗಿ ಮೆಚ್ಚುಗೆ ಪಡೆಯಿತು. ಅದರ ಮುಂದುವರಿದ ಭಾಗವಾಗಿ ‘ಸ್ತ್ರೀ 2’ ಸಿನಿಮಾ ಮೂಡಿ ಬಂದಿದೆ. ಮೊದಲ ಚಿತ್ರದ ಕಥೆಗೆ ಕನೆಕ್ಷನ್ ಕೊಟ್ಟು ‘ಸ್ತ್ರೀ 2’ ಚಿತ್ರವನ್ನು ಮುಂದುವರಿಸಲಾಗಿದೆ. ಸಿನಿಮಾದಲ್ಲಿ ಭರ್ಜರಿ ಕಾಮಿಡಿ ಇದೆ. ಈ ಕಾರಣಕ್ಕೆ ಜನರ ಮನಸ್ಸು ಗೆದ್ದಿದೆ.
Poll (Public Option)

Post a comment
Log in to write reviews