
ಚಿತ್ರದುರ್ಗ: ಬೀದಿ ನಾಯಿಗಳ ದಾಳಿಗೆ ಬಾಲಕನೊಬ್ಬ ಸವನ್ನಪ್ಪಿರುವ ಘಟನೆ ಚಿತ್ರದುರ್ಗ ಜಿಲ್ಲೆ ಮೊಳಕಾಲ್ಮೂರು ತಾಲೂಕಿನ ರಾಂಪುರ ಗ್ರಾಮದಲ್ಲಿ ನಡೆದಿದೆ.
ರಾಂಪುರ ಗ್ರಾಮದ ಮಿಥುನ್(11) ಮೃತ ಬಾಲಕ. ಟ್ಯೂಷನ್‌ಗೆ ತೆರಳುವ ವೇಳೆ ಬೀದಿ ನಾಯಿಗಳ ಗುಂಪೊಂದು ಬಾಲಕನ ಮೇಲೆ ದಾಳಿ ನಡೆಸಿವೆ. ಗುಂಪಾಗಿ ಅಟ್ಯಾಕ್ ಮಾಡಿರುವ ಬೀದಿ ನಾಯಿಗಳು ಬಾಲಕನ ತಲೆ, ಕೆನ್ನೆ ಹಾಗೂ ಮೈಯೆಲ್ಲಾ ಕಚ್ಚಿ ಗಾಯಗೊಳಿಸಿವೆ. ಈ ವೇಳೆ ಆಟೋ ಚಾಲಕ ರಾಜಪ್ಪ ಬಾಲಕನ ರಕ್ಷಣೆಗೆ ಮುಂದಾಗಿದ್ದು, ಗಾಯಾಳು ಬಾಲಕ ಮಿಥುನ್‌ಗೆ ರಾಂಪುರ ಆಸ್ಪತ್ರೆಯಲ್ಲಿ ಚಿಕಿತ್ಸೆ ನೀಡಲಾಗಿತ್ತು.
ಬಾಲಕನ ಸ್ಥಿತಿ ಗಂಭೀರವಾದ ಹಿನ್ನೆಲೆ ಆತನನ್ನು ಬಳ್ಳಾರಿ ವಿಮ್ಸ್‌ಗೆ ಕರೆದೊಯ್ಯುವ ವೇಳೆ ಮಾರ್ಗ ಮಧ್ಯೆ ಮಿಥುನ್ ಸಾವನ್ನಪ್ಪಿದ್ದಾನೆ.
Poll (Public Option)

Post a comment
Log in to write reviews