
ಬೆಂಗಳೂರು: ಹೆಚ್ಚುತ್ತಿರುವ ರೈತರ ಆತ್ಮಹತ್ಯೆ ತಡೆಗೆ ಶಾಶ್ವತ ಪರಿಹಾರ ಕಂಡುಕೊಳ್ಳುವ ದೃಷ್ಟಿಯಿಂದ ಕೃಷಿಗೆ ಕೈಗಾರಿಕ ಮಾನ್ಯತೆ ನೀಡಿ ಅನ್ನದಾತರ ಆದಾಯ ವೃದ್ಧಿಸುವ ಉದ್ದೇಶದಿಂದ ರಾಜ್ಯ ಸರ್ಕಾರ ರೈತ ಸಮೃದ್ಧಿ ಯೋಜನೆ ಜಾರಿಗೆ ಮಾಡಲು ಮುಂದಾಗಿದೆ.
ಸಿ ಎಂ ಸಿದ್ದರಾಮಯ್ಯ ಬಜೆಟ್‌ನಲ್ಲಿ ಪ್ರಕಟಿಸಿದ ನಂತರ, ಯೋಜನೆ ಜಾರಿಗೆ ಸಂಧಿಸಿದಂತೆ ಮಣಿಪುರದ ಕೇಂದ್ರ ಕೃಷೀ ವಿಶ್ವವಿದ್ಯಾಲಯದ ವಿಶ್ರಾಂತ ಕುಪಪತಿ ಡಾ.ಎಸ್ ಅಯ್ಯಪ್ಪನ್, ಅಧ್ಯಕ್ಷತೆಯ ಉನ್ನತ ಸಮಿತಿ ಯೋಜನೆ ರೂಪುರೇಷೆ ಸಿದ್ಧಪಡಿಸಿದೆ. ಯೋಜನೆ ಜಾರಿಗೆ ತರುಲು ಕಷಿ ಇಲಾಖೆ ಅಧ್ಯಯನ ನಡೆಸಿದೆ.
ಕೃಷಿ ಉದ್ಯಮಕ್ಕೆ ಮಾನ್ಯತೆ ಸಿಗಲು ಅಗತ್ಯವಾದ ಪೂರ್ವಸಿದ್ಧತೆ ಕೈಗೂಳ್ಳುವುದೇ ರೈತ ಸಮೃದ್ಧಿ ಯೋಜನೆಯ ಮೂಲ ಉದ್ದೇಶ ವಾಗಿದೆ.ಕೃಷಿ ಹಾಗು ಕೃಷಿ ಸಂಬಂಧಿತ ಇಲಾಖೆಗಳ ಯೋಜನೆಗಳನ್ನು ಕ್ರೋಡೀಕರಿಸಿ ರಾಜ್ಯಾದಲ್ಲಿ ಪ್ರಗತಿಪರ ಕೃಷಿಕರನ್ನು ಹುಟ್ಟು ಹಾಕುವ ಆಶಯ ಹೊಂದಿದೆ ಆಗಷ್ಟೇ ಉಳಿದ ರೈತರನ್ನು ಉಳಿದ ವಿಚಾರದಲ್ಲಿ ಎಚ್ಚರಿಸಲು ಸಾದ್ಯಾವಾಗುತ್ತದೆ.ಇಲ್ಲದದ್ದಾರೆ ರೈತರ ಬದುಕು ಸಂಕಷ್ಟಕ್ಕೆ ಸಿಲುಕುತ್ತದೆ.
Poll (Public Option)

Post a comment
Log in to write reviews