2024-12-24 06:36:40

News broadcasting is the medium of broadcasting various news events and other information via television, radio, or the internet in the field of broadcast journalism.

Get In Touch

  • info@samayanews.tv
  • 8050000444
  • Samaya News, 48, 2nd Floor, 2nd Main, 2nd Cross, Ganganagar, Muthappa Block, RT Nagar, Bengaluru, Karnataka 560032

ಯಾವುದೇ ಸಮಯದಲ್ಲಾದರೂ ರಾಜ್ಯ ಸರ್ಕಾರ ಬೀಳಬಹುದು: ಜಗದೀಶ್‌ ಶೆಟ್ಟರ್ 

ಹುಬ್ಬಳ್ಳಿ: ಕಾಂಗ್ರೆಸ್ ಶಾಸಕರಲ್ಲೇ ಸರ್ಕಾರದ ಬಗ್ಗೆ ಅಸಮಾಧಾನವಿದೆ. ಹೀಗಾಗಿ ರಾಜ್ಯ ಸರ್ಕಾರ ಯಾವ ಕ್ಷಣದಲ್ಲಾದರೂ ಪತನವಾಗಬಹುದು ಎಂದು ಸಂಸದ ಜಗದೀಶ್ ಶೆಟ್ಟರ್ ತಿಳಿಸಿದ್ದಾರೆ.
ಹುಬ್ಬಳ್ಳಿಯಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಸರ್ಕಾರದ ವಿರುದ್ಧ ಶಾಸಕರೇ ಅಸಮಾಧಾನ‌ ತೋಡಿಕೊಳ್ಳುತ್ತಿದ್ದಾರೆ. ಅದು ಲೋಕಸಭಾ ಚುನಾವಣೆ ಬಳಿಕ ಕಾಂಗ್ರೆಸ್ ಸರ್ಕಾರದಲ್ಲಿ ಒಳಬೇಗುದಿ ಹೆಚ್ಚಾಗುತ್ತಿದೆ. ಯಾವುದೇ ಸಮಯದಲ್ಲಿ ಏನು ಬೇಕಾದರೂ ಆಗಬಹುದು. ಸರ್ಕಾರ ಪತನವೂ ಆಗಬಹುದು. ಅದು ಕಾಂಗ್ರೆಸ್ ಪಕ್ಷದ‌ ಶಾಸಕರಿಂದಲೇ ರಾಜ್ಯ ಸರ್ಕಾರ ಪತನವಾಗುತ್ತೆ. ಆದರೆ ಯಾವಾಗ ಅನ್ನೋದು ಹೇಳಲು ಬರೋದಿಲ್ಲ ಎಂದರು.
ವಾಲ್ಮೀಕಿ‌ ನಿಗಮದ ಹಗರಣದಲ್ಲಿ ಕೇವಲ‌ ನಾಗೇಂದ್ರ ಅವರ ತಲೆದಂಡ ಆಯ್ತು ಮತ್ತೇನೂ ಬೆಳವಣಿಗೆ ಆಗಿಲ್ಲ. ನೆಪಮಾತ್ರಕ್ಕೆ ತನಿಖೆ ನಡೆಯುತ್ತಿದೆ. ಆದರೆ ಅದರಿಂದ ಹೆಚ್ಚಿನ ನಿರೀಕ್ಷೆಯೇನು ಇಲ್ಲ. ಸರ್ಕಾರ ಈ ಪ್ರಕರಣವನ್ನ ಗಂಭೀರವಾಗಿ ತೆಗೆದುಕೊಂಡಿಲ್ಲ. ಕೇವಲ ಸಿಎಂ‌, ಡಿಸಿಎಂ ಬದಲಾವಣೆ ವಿಚಾರದಲ್ಲಿ ಗೊಂದಲ ಸೃಷ್ಟಿ ಮಾಡುತ್ತಿದೆ ಎಂದು ವಾಗ್ದಾಳಿ ನಡೆಸಿದರು.

Post a comment

No Reviews