ಕ್ರೀಡೆ
ಭಾರತಕ್ಕೆ ಡಬಲ್ ಕಂಚು ತಂದುಕೊಟ್ಟ ಸ್ಟಾರ್ ಶೂಟರ್ ಮನು ಭಾಕರ್ಗೆ ದೆಹಲಿಯಲ್ಲಿ ಅದ್ಧೂರಿ ಸ್ವಾಗತ

ನವದೆಹಲಿ: ಒಂದೇ ಒಲಿಂಪಿಕ್ಸ್ ನಲ್ಲಿ ಎರಡು ಪದಕ ಗೆದ್ದ ಮೊದಲ ಭಾರತೀಯ ಅಥ್ಲೀಟ್ ಎನ್ನುವ ಹೆಗ್ಗಳಿಕೆಗೆ ಪಾತ್ರರಾಗಿರುವ ಮನು ಭಾಕರ್ ಅವರು ಬುಧವಾರ ಬೆಳಿಗ್ಗೆ ದೆಹಲಿಗೆ ಬಂದಿಳಿದಿದ್ದು ಅವರಿಗೆ ಭರ್ಜರಿ ಸ್ವಾಗತ ಮಾಡಲಾಯಿತು.
ಇಂದಿರಾಗಾಂಧಿ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣದಲ್ಲಿ ಮನು ಭಾಕರ್ ಅವರಿಗೆ ವಿಮಾನ ನಿಲ್ದಾಣದ ಸಿಬ್ಬಂದಿ ಗಳು, ಮಾಧ್ಯಮ ಪ್ರತಿನಿಧಿಗಳು, ಅಭಿಮಾನಿಗಳು, ಮನು ಭಾಕರ್ ಅವರ ಪೋಷಕರು, ಸಂಬಂಧಿಕರು, ಬಾಲ್ಯದ ತರಬೇತುದಾರರು ಹೂಮಳೆ ಗೈದು ಭವ್ಯವಾದ ಸ್ವಾಗತ ನೀಡಿದರು.
22 ರ ಹರೆಯದ ಮನು ವನಿತೆಯರ 10 ಮೀಟರ್ ಏರ್ ಪಿಸ್ತೂಲ್ ಸ್ಪರ್ಧೆಯಲ್ಲಿ ಕಂಚಿನೊಂದಿಗೆ ಪದಕಪಟ್ಟಿಯಲ್ಲಿ ಭಾರತದ ಖಾತೆಯನ್ನು ತೆರೆದ ಬಳಿಕ ಸರಬ್ಜೋತ್ ಸಿಂಗ್ ಅವರೊಂದಿಗೆ 10 ಮೀಟರ್ ಏರ್ ಪಿಸ್ತೂಲ್ ಮಿಶ್ರ ತಂಡ ಸ್ಪರ್ಧೆಯಲ್ಲಿ ಇನ್ನೊಂದು ಕಂಚಿನ ಪದಕ ಸೇರಿಸಿದ್ದರು.
Poll (Public Option)

Post a comment
Log in to write reviews