ಟಾಪ್ 10 ನ್ಯೂಸ್
ಶ್ರೀರಾಮ ಜನ್ಮಭೂಮಿ ಟ್ರಸ್ಟ್ ಅಧ್ಯಕ್ಷ ಗೋಪಾಲ್ ದಾಸ್ ಆರೋಗ್ಯ ಸ್ಥಿತಿ ಗಂಭೀರ

ಅಯೋಧ್ಯೆ :ಶ್ರೀರಾಮ ಜನ್ಮಭೂಮಿ ತೀರ್ಥ ಕ್ಷೇತ್ರ ಟ್ರಸ್ಟ್‌ನ ಅಧ್ಯಕ್ಷ ಮಹಂತ್ ನೃತ್ಯ ಗೋಪಾಲ್ ದಾಸ್ ಅವರ ಆರೋಗ್ಯ ಸ್ಥಿತಿ ಗಭೀರವಾಗಿದ್ದು ಅವರನ್ನು ಮೇದಾಂತ ಆಸ್ಪತ್ರೆಗೆ ದಾಖಲಿಸಲಾಗಿದೆ.
ಮೂತ್ರದ ಸಮಸ್ಯೆ ಮತ್ತು ಆಹಾರ ಸೇವನೆಯ ಸಮಸ್ಯೆಯಿಂದಾಗಿ ಅವರನ್ನು ಆಸ್ಪತ್ರೆಗೆ ಸೇರಿಸಬೇಕಾಯಿತು. ಕಷ್ಣ ಜನಾಷ್ಟಮಿಯಂದು ಮಥುರಾಗೆ ಹೋದಾಗ ಮಹಂತ್ ನತ್ಯ ಗೋಪಾಲ್ ದಾಸ್ ಅವರ ಆರೋಗ್ಯ ಹದಗೆಟ್ಟಿತ್ತು.
ಅವರ ಆರೋಗ್ಯದಲ್ಲಿ ಸುಧಾರಣೆ ಕಾಣದ ಕಾರಣ ನಿನ್ನೆ ಸಂಜೆ ಮೇದಾಂತ ಆಸ್ಪತ್ರೆಗೆ ದಾಖಲಿಸಲಾಗಿದೆ. ಮಹಂತ್ ನತ್ಯ ಗೋಪಾಲ್ ದಾಸ್ ಅವರಿಗೂ ಕೊರೊನಾ ಸೋಂಕು ತಗುಲಿತ್ತು. ಈ ಅವಧಿಯಲ್ಲಿ, ಅವರು ಹಲವಾರು ದಿನಗಳವರೆಗೆ ವೈದ್ಯರ ಮೇಲ್ವಿಚಾರಣೆಯಲ್ಲಿದ್ದರು ಮತ್ತು ಚೇತರಿಸಿಕೊಂಡ ನಂತರ ಅಯೋಧ್ಯೆಗೆ ಮರಳಿದ್ದರು.
ಮಹಂತ್ ದೀರ್ಘಕಾಲದ ಮೂತ್ರಪಿಂಡ ವೈಫಲ್ಯ ಎಂಬ ಕಾಯಿಲೆಯಿಂದ ಬಳಲುತ್ತಿದ್ದರು.ಇದಲ್ಲದೇ ಅವರಿಗೆ ಮೂತ್ರನಾಳದ ಸೋಂಕು ಅಂದರೆ ಯುಟಿಐ ಕೂಡ ಇತ್ತು. ಈ ರೋಗದಲ್ಲಿ ಮೂತ್ರನಾಳವು ಸೋಂಕಿಗೆ ಒಳಗಾಗುತ್ತದೆ.
Poll (Public Option)

Post a comment
Log in to write reviews